ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ಅಶ್ವಿನ್ ಕುಮಾರ್…!!!

ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ
ಅಶ್ವಿನ್ ಕುಮಾರ್

ವರದಿ:ರಾಜಪ್ಪ.ಎಂ

ಹೂವಿನ ಹಡಗಲಿ: ವಿಜ್ಞಾನ ತಂತ್ರಜ್ಞಾನದಿಂದ ಪ್ರಗತಿ ಸಾಧ್ಯ ಎಂದು ಗ್ಲೋಬಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಅಶ್ವಿನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತುಂಗಭದ್ರಾ ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಜನರ ದೈನಂದಿನ ಬದುಕಿನಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ.
ಸಮಾಜ ದೇಶದ ಅಭಿವೃದ್ಧಿಗೆ
ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಿಯುಸಿ ಹಂತದಲ್ಲಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಮೇಡಂ ಕ್ಯೂರಿ ಐಸಾಕ್ ನ್ಯೂಟನ್ ಆಲ್ಫ್ರೆಡ್ ನೊಬೆಲ್
ಆಲ್ಬರ್ಟ್ ಐನ್ ಸ್ಟೈನ್ ಸಿ ವಿ ರಾಮನ್, ಚಂದ್ರಶೇಖರ್,
ಅಬ್ದುಲ್ ಕಲಾಂ
ಮೈಕೆಲ್ ಫ್ಯಾರಡೆ
ಥಾಮಸ್ ಅಲ್ವ ಎಡಿಸನ್ ಮೊದಲಾದ ವಿಜ್ಞಾನಿಗಳು
ಸತತ ಪರಿಶ್ರಮದಿಂದ ಸಂಶೋಧನೆ ಮಾಡಿದ್ದಾರೆ.
ಮಾತ್ರವಲ್ಲದೆ ವಿಜ್ಞಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದ
ಪಠ್ಯಗಳ ಪ್ರಮುಖ ಅಂಶಗಳು ರಾಸಾಯನಿಕ ಕ್ರಿಯೆಗಳು ವಿವರಗಳನ್ನು ಪ್ರಯೋಗಾತ್ಮಕವಾಗಿ ಪ್ರಸ್ತುತ ಪಡಿಸಿದರು.

ಗ್ರಾಮೀಣ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿ ಹೆಚ್ಚು ಅಂಕ ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗ್ಲೋಬಲ್ ಪದವಿ ಪೂರ್ವ ಕಾಲೇಜಿನಲ್ಲಿ
ಪ್ರವೇಶಕ್ಕ ವಿಶೇಷ ಅವಕಾಶ ಕಲ್ಪಿಸಲಾಗುವುದು ಎಂದು
ಕಾಲೇಜಿನ ಆಡಳಿತ ಮಂಡಳಿ ವ್ಯವಸ್ಥಾಪಕ ಪತ್ರಕರ್ತ ಎಂ ದಯಾನಂದ ತಿಳಿಸಿದರು.

ಮುಖ್ಯ ಗುರು ಸುರೇಶ ಅಂಗಡಿ
ವಿಜ್ಞಾನ ಶಿಕ್ಷಕಿ ಪುರಾಣಮಠದ ಗೀತಾ, ಚಿತ್ರಕಲಾ ಶಿಕ್ಷಕರಾದ ಎಸ್ ದ್ವಾರಕೀಶ್ ರೆಡ್ಡಿ
ಮಕ್ಕಳೊಂದಿಗೆ ಬೆರೆತು ಪಾಠ ಆಲಿಸಿದ್ದು ವಿಶೇಷವಾಗಿತ್ತು.

ಪ್ರೊ ಅಶ್ವಿನ್ ಕುಮಾರ್ ಹಾಗೂ
ಎಂ ದಯಾನಂದ ರವರಿಗೆ
ಸಿಂಚನ ಪ್ರಕಾಶನದ ವತಿಯಿಂದ
ಲಡಾಯಿ ಪ್ರಕಾಶನದ
ಸಂವಿಧಾನ ಓದು ಪುಸ್ತಕಗಳನ್ನು
ವಿದ್ಯಾರ್ಥಿಗಳಾದ ಪ್ರದೀಪ್ ಹಾಗೂ ಗೌತಮಿ ಕೆ ಬಿ ವಿತರಿಸಿದರು.
ಶಾಲೆಯ ಸುಮಾರು 120 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend