*ಉತ್ತಮ ಸೇವೆ, ಉತ್ತಮ ಆಡಳಿತದಿಂದ ಮಾತ್ರ 3ನೇ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯ ಜೆ. ಬಾಬು ನಾಯಕ್.**ಸಂಡೂರು ಗಣಿ ಅದಿರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆಲವು ದಿನಗಳ ಕಾಲ ಜಿದ್ದಾಜಿದ್ದಿ,ನಡೆದು ಅತ್ಯಂತ ಬೃಹತ್ ಮಟ್ಟದ ಬಹು ಬೆಂಬಲದಿಂದ ಕೆ ಬಾಬು ನಾಯಕ್ ಸುಶೀಲ್ ನಗರ ಇವರು ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆ ಆಗಿರುವಂತ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳ ಆಯ್ಕೆಯನ್ನು ಪೂಜಾ ಕಾರ್ಯಕ್ರಮದೊಂದಿಗೆ ಆಯ್ಕೆ ಮಾಡಲಾಯಿತು. ನಂತರದಲ್ಲಿ ಜೆ ಬಾಬು ನಾಯಕ್ ಮಾತಾಡಿ ಉತ್ತಮ ಸೇವೆ ಉತ್ತಮ ಆಡಳಿತದಿಂದ ಮಾತ್ರ ಒಬ್ಬ ಮನುಷ್ಯನಿಗೆ ಮತ್ತೆ ಮತ್ತೆ ಅಧಿಕಾರ ಸಿಗಲು ಸಾಧ್ಯ ನನ್ನ ಕೆಲಸ ನನ್ನ ಸೇವೆ ಎಂದಿಗೂ ಕೈ ಬಿಡಲಿಲ್ಲ ಮತ್ತು 21 ಗ್ರಾಮ ಘಟಕಗಳ ಲಾರಿ ಮಾಲೀಕರು ಸಹ ನನಗೆ ಯಾವತ್ತು ಕೈ ಬಿಡುವುದಿಲ್ಲ ಎಂದು ಮಾತನಾಡಿದರು. ಮಳೆಗಾಲದಲ್ಲಿ ಲಾರಿಗಳಿಗೆ ದುಡಿಮೆ ಇಲ್ಲದ ಕಾರಣ ಫೈನಾನ್ಸ್ ಗಳು ಲಾರಿ ಮಾಲೀಕರಿಗೆ ಯಾವುದು ಒತ್ತಡ ಏರಿದಂತೆ ಪತ್ರ ಬರೆಯುತ್ತೇವೆ. ಎಂದರು. ಇತ್ತೀಚಿಗೆ ಜಿಂದಾಲ್ ಕಂಪನಿ ಶೇಕಡ 6.5 ರಷ್ಟು ಬೆಲೆ ನಿಗದಿ ಮಾಡಿದೆ ಹಣ ಪಾವತಿಸುವಲ್ಲಿ ಸಣ್ಣಪುಟ್ಟ ಅನಾನುಕೂಲಗಳು ಇದ್ದು ಅದರ ಬಗ್ಗೆ ಸಹ ಚರ್ಚೆ ಮಾಡುತ್ತೇವೆ. ಎಂದರು. ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಪೂಜ ಕಾರ್ಯಕ್ರಮದಲ್ಲಿ ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳ್ಳಾರಿ ಜಿಲ್ಲಾ ಗಣಿ ಅಧಿರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ವೆಂಕಟರಾವ್ ನಾಡಿ, ಹೊಸಪೇಟೆ ತಾಲೂಕು ಅಧ್ಯಕ್ಷರು ಸದಾಶಿವ, ವಿಜಯನಗರ ಜಿಲ್ಲಾ ಅಧ್ಯಕ್ಷರು ಪಂಪಾಪತಿ, ಕೊಪ್ಪಳ ಜಿಲ್ಲಾ ಅಧ್ಯಕ್ಷರು ಅಬ್ದುಲ್ ವಹಿಲ್, ಸಂಡೂರು ಉಪಾಧ್ಯಕ್ಷರು ದಾದಾ ಕಲಂದರ್, ಕಾರ್ಯದರ್ಶಿ ಬಿ.ಜಿ ಮಲ್ಲಿಕಾರ್ಜುನ, ಗೌರವಾಧ್ಯಕ್ಷರು ಜಿ ಸಿದ್ದಪ್ಪ, ಜಂಟಿ ಕಾರ್ಯದರ್ಶಿಗಳು ಸಂತೋಷ್ ಕೆ, ಖಜಾಂಚಿ ಬಿ ಮಂಜುನಾಥ, ಉಪಾಧ್ಯಕ್ಷರು ಕೆ ಹೊಳೆಯಪ್ಪ, ಕಾನೂನು ಸಲಹೆಗಾರರು ಕೆ ಗುರುಪ್ರಸಾದ್, ಎಂ ಬಸವರಾಜ, ಕೃಷ್ಣ ನಾಯಕ್, ವಿಎನ್ ವೆಂಕಟೇಶ್, ಎಚ್ ನಾಗೇಂದ್ರ, ಹುಸೇನ್ ಭಾಷಾ ಎಚ್, ಚಂದ್ರಶೇಖರ್ ಎಚ್, ಗಿರೀಶ್, ವಿಜಯಕುಮಾರ್, ಯಾರಿಸ್ವಾಮಿ, ಸಿದ್ದಪ್ಪ, ಮಂಜುನಾಯಕ್, ಆರ್ ಕೃಷ್ಣ ನಾಯಕ್, ಹೆಚ್ಚು ಜಂಬಯ್ಯ, ಬುಡೇ ಸಾಬ್,H,.ಕಾಸಿಂಸಾಬ್,E, ಸುನಿಲ್ ಕುಮಾರ್, ಇತರರು ಭಾಗವಹಿಸಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
