ಕಾಶಪ್ಪ ಸಂಡೂರು ತಾಲೂಕು ವರದಿಗಾರರು…

ಗಣೇಶ್ ಹಬ್ಬವೆಂದರೆ ಇಡೀ ನಾಡಿನಾದ್ಯಂತ ಸಂಭ್ರಮವೋ ಸಂಭ್ರಮ. ಹಾಗೆ ಚಿಕ್ಕ ಮಕ್ಕಳಿಗು ದೊಡ್ಡವರಿಗೂ ಎಲ್ಲಿಲ್ಲದ ಸಂತೋಷ. ವಿಶೇಷವೆಂದರೆ ವಿಧವಿದವಾದ ಗಣೇಶ ಮೂರ್ತಿಗಳನ್ನು ಹೆಜ್ಜೆ ಹೆಜ್ಜೆಗೂ ಕೂರಿಸಿ ಪೂಜೆ ಸಲ್ಲಿಸಿ ನೈವೇದ್ಯ ಮಾಡಿ ಆತನಿಗೆ ವಿಧವಿಧವಾದ ಆಹಾರ ತಿಂಡಿಗಳನ್ನು ಮಾಡಿ ಆತನನ್ನು ಪೂಜಿಸುತ್ತಾರೆ. ಆತನನ್ನು ಕೆಲವರು ಮೂರು ದಿನಗಳ ಕಾಲ ಕೆಲವರು ಒಂದು ದಿನ ಕಾಲ ಕೆಲವರು 9 ದಿನಗಳ ಕಾಲ ಕೆಲವರು 15 ದಿನಗಳ ಕಾಲ ಹೀಗೆ ಹಲವಾರು ರೀತಿಯಲ್ಲಿ ಆತನನ್ನು ಕಳಿಸಿ ಕೊಡುತ್ತಾರೆ. ಆದರೆ ಸಂಡೂರುನಲ್ಲಿ ಇನ್ನೂ ವಿಶೇಷವಾಗಿ ಈ ತಂಡವು ಆಚರಣೆ ಮಾಡಿದೆ. ಹಳ್ಳಿ ಹಳ್ಳಿಗೂ ಆರೋಗ್ಯ ಸೇವೆ ನೀಡುತ್ತಿರುವ ಅಮೃತವಾಹಿನಿ ಅಂಬುಲೆನ್ಸ್ ನಲ್ಲಿ, ಗಣೇಶ್ ಚತುರ್ಥಿ ಹಬ್ಬವನ್ನು ಸುಂದರವಾಗಿ ಆಚರಣೆ ಮಾಡಿದ್ದಾರೆ. ತಾಲೂಕಿನಲ್ಲಿ ಮನೆ ಮನೆಗೆ ಉಚಿತ ಆರೋಗ್ಯ ಸೇವೆ (ಸಿಎಸ್ಆರ್ ಅನುದಾನದ ಅಡಿಯಲ್ಲಿ NMDC)ನೀಡುತ್ತಿರುವ ಅಮೃತವಾಹಿನಿ,ಮುರ್ಗೋಡ್ ಸಂಸ್ಥೆಯ ಮೊಬೈಲ್ ಮೆಡಿಕಲ್ ಯೂನಿಟ್ ವಾಹನದಲ್ಲಿ ಗಣೇಶ್ ಚತುರ್ಥಿಯ ಹಬ್ಬವನ್ನು ತುಂಬಾ ಖುಷಿ ಖುಷಿಯಾಗಿ ಆಚರಿಸಿದರು . ಮುರುಗೋಡ್ ಸಂಸ್ಥೆಯ ಕೋ,ಆರ್ಡಿನೇಟರ್ ಅದ ಆಸೀಫ್ ದೊಡ್ಮನೆ, ತ್ಯಾಗದಾಳ್. ಸಿಬ್ಬಂದಿಗಳಾದ ಬಸವರಾಜ್ ,ಪ್ರವೀಣ್ ಕುಮಾರ್,ಆಕಾಶ್ ಕುಮಾರ್ ,ಕಿರಣ್ ಕುಮಾರಿ ,ಶಾಂತ ,ಪ್ರಕೃತಿ,ಮಂಜುಳ ,ಒಬಾಮ್ಮ ಅವರು ಗಣೇಶ್ ಚತುರ್ಥಿಯನ್ನು ವಾಹನದಲ್ಲಿ ಆಚರಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
