ಕ್ರೀಡೆಗಳಿಂದ ಆರೋಗ್ಯ ವೃದ್ಧಿ
ರಫಿ ಅಹಮದ್ ಖವಾಸ್
ವರದಿ:ರಾಜಪ್ಪ.ಎಂ
ಹೂವಿನ ಹಡಗಲಿ: ಕ್ರೀಡೆಗಳಿಂದ ಆರೋಗ್ಯ ವೃದ್ಧಿ ಆಗುತ್ತದೆ ಎಂದು ತಾಲೂಕು ದೈಹಿಕ ಅಧೀಕ್ಷಕರಾದ ರಫಿ ಅಹಮದ್ ಖವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಆರ್ ಪಿ ಕೆ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಆರ್ ಪಿ ಕೆ ಸಂಸ್ಥೆಯ
ವತಿಯಿಂದ ಭಾನುವಾರ ಆಯೋಜಿಸಿದ್ದ 2025-26 ನೇ ಸಾಲಿನ
14 ವರ್ಷದ ಒಳಗಿನ ಪಟ್ಟಣದ ಕ್ಲಸ್ಟರ್ ಮಟ್ಟದ
ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮಾನಸಿಕ ಬೆಳವಣಿಗೆ ಆಗುತ್ತದೆ. ಪಠ್ಯದ ಜೊತೆಗೆ
ಆಟೋಟಗಳಲ್ಲಿ ಎಲ್ಲಾ ಮಕ್ಕಳು ಭಾಗವಹಿಸಬೇಕು ಎಂದರು.
ತಾಲೂಕಿನ ಎಲ್ಲಾ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟಗಳು ತಾಲೂಕು ಕ್ರೀಡಾಂಗಣದಲ್ಲಿ ಆಗಸ್ಟ್ ಮಾಹೆಯಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಉದ್ಘಾಟನೆ ಪಂದ್ಯವನ್ನು ದಾವಣಗೆರೆ ಕಾನ್ವೆಂಟ್ ಪಬ್ಲಿಕ್ ಶಾಲೆ ಮತ್ತು ಎದುರಾಳಿ ಆರ್ ಪಿ ಕೆ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮಕ್ಕಳು ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಿದ್ದರು.
ಸಿಆರ್ಪಿ ಚನ್ನವೀರನಗೌಡ, ಶಾಲೆಯ ಕಾರ್ಯದರ್ಶಿ ಹುಸೇನ್ ಮಿಯಾ ಕಪಾಲಿ ಮಾತನಾಡಿ,ಮಕ್ಕಳಿಗೆ ಮೊಬೈಲ್ ನಿಂದ ದೂರವಿರಿ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಿರಿ ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಿ ಎಂದು ಹೇಳಿದರು.
ಶಾಲಾ ದಾನಿಗಳಾದ ಕಪಾಲಿ ರಾಜಾಸಾಬ್, ಕಪಾಲಿ ಖಾಜಾಬನ್ನಿ, ಕಾರ್ಯದರ್ಶಿ ಹುಸೇನ್ ಮಿಯಾ ಕಪಾಲಿ
ಕ್ರೀಡಾಪ್ರೇಮಿ ಪತ್ರಕರ್ತ ವೀರೇಶ್ ಕಲ್ಮಠ ಪಟ್ಟಣ ಶಿಕ್ಷಣ ಸಂಯೋಜಕ ಚನ್ನವೀರನಗೌಡ
ಮುಖ್ಯ ಗುರುಗಳಾದ
ಹನುಮಂತಪ್ಪ, ಶಿಕ್ಷಕಿ ಅಫಿಯಾ
ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಬಳ್ಳಾರಿ, ಕಾರ್ಯದರ್ಶಿ ಜೆ ಪ್ರಸನ್ನ ಕುಮಾರ್,
ಪಿ ಎನ್ ಪಾಟೀಲ್, ತಾಲೂಕು ಕ್ರೀಡಾ ಸಂಚಾಲಕ ಸ್ವಾಮಿನಾಥ ರಾಮಸ್ವಾಮಿ
ದೈಹಿಕ ಶಿಕ್ಷಕರಾದ ನಾಗರಾಜ್,
ಮಲ್ಲಿಕಾರ್ಜುನ, ಪ್ರಕಾಶ್ ನಾಯಕ್, ಯಂಕಾನಾಯ್ಕ, ಮಂಜುಳಾ ಜಿ, ಮಲ್ಲಿಕಾರ್ಜುನ ಜಿ,ಮಹಮದ್ ರಫಿ, ಸಿದ್ದಪ್ಪ,
ಬಾಷಾ, ಇತರರು ಇದ್ದರು.
ಪಟ್ಟಣದ ಸರ್ಕಾರಿ ಅನುದಾನಿತ ಅನುದಾನರಹಿತ ಪ್ರಾಥಮಿಕ ಶಾಲೆಗಳ 800 ಕ್ಕೂ ಹೆಚ್ಚು ಮಕ್ಕಳು ವಿವಿಧ ಆಟಗಳಲ್ಲಿ ಭಾಗವಹಿಸಿದ್ದರು. ಆರ್ ಪಿ ಕೆ ಪಬ್ಲಿಕ್ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಎಲ್ಲಾ ಮಕ್ಕಳಿಗೂ ಮತ್ತು ಶಿಕ್ಷಕರಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
