ನಿಂಬಳಗೆರೆ: ಬಾಲಕ ಮತ್ತು ಬಾಲಕಿಯರ ವಾಲಿಬಾಲ್, ಥ್ರೋಬಾಲ್ ತಾಲೂಕು ಮಟ್ಟಕ್ಕೆ ಆಯ್ಕೆ
ಕೊಟ್ಟೂರು ತಾಲೂಕಿನ ಉಜ್ಜಿನಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಿಂಬಳಗೆರೆ ಈ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಈ ಕ್ರೀಡಾಕೂಟದಲ್ಲಿ ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಾಲಿಬಾಲ್ ಬಾಲಕರ ವಿಭಾಗದಲ್ಲಿ ಎಂ.ರಾಜುಗೌಡ, ಎಂ.ಬೊಮ್ಮಜ್ಜ, ಎನ್.ಜಿ. ಮುತ್ತುರಾಜ್, ಜಿ.ಪುನೀತ್, ಬಿ.ಪೃಥ್ವಿರಾಜ್, ಬಿ.ಶಿವಕುಮಾರ್ ಪ್ರಥಮ ಸ್ಥಾನದಲ್ಲಿ ವಿಜೇತರಾದರೆ, ವಾಲಿಬಾಲ್ ಬಾಲಕಿಯರ ವಿಭಾಗದಲ್ಲಿ ಜಿ. ಬಿ.ರಾಧಾ, ಎಂ.ತನುಜ, ಜಯಲಕ್ಷ್ಮಿ, ಕೆ.ಎಂ.ನಾಗವೇಣಿ,ಜಿ. ಖುಷಿ, ಎನ್.ಎಸ್.ವರ್ಷಿತ ಪ್ರಥಮ ಸ್ಥಾನವನ್ನು ಪಡೆದು ಕ್ರಮವಾಗಿ ಎರಡು ತಂಡಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿಭಾಗದ ಥ್ರೋ ಬಾಲ್ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.ತಾಲೂಕು ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದಿಸುತ್ತಾ, ತಾಲೂಕು ಮಟ್ಟದಲ್ಲೂ ವಿಜಯಶಾಲಿಗಳಾಗಲೆಂದು ಸಂಸ್ಥೆಯ ಕಾರ್ಯದರ್ಶಿ ಎಸ್.ವೀರಣ್ಣ ಸರ್,ಮುಖ್ಯ ಶಿಕ್ಷಕಿ ಕೆ.ಶಿವಲೀಲಾ ಮೇಡಂ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ…

ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
