;

ಹೊಸದುರ್ಗದಲ್ಲೂ ದೇಶಾಭಿಮಾನ ಕಿಚ್ಚಿತ್ತು – ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಬಿಆರ್. ರವಿಕುಮಾರ್…!!!

ಹೊಸದುರ್ಗದಲ್ಲೂ ದೇಶಾಭಿಮಾನ ಕಿಚ್ಚಿತ್ತು –
ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಬಿಆರ್. ರವಿಕುಮಾರ್

ಹೊಸದುರ್ಗ: ಸಾವಿರಾರು ದೇಶಭಕ್ತರ ಹೋರಾಟ ಮತ್ತು ಪ್ರಾಣತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದೊರತಿದ್ದು, ದೇಶಕ್ಕಾಗಿ ಬಲಿದಾನಗೈದವರನ್ನು ಮರೆಯಬಾರದು ನಾವೆಲ್ಲರೂ ಸಧೃಡ ದೇಶ ನಿರ್ಮಾಣಕ್ಕೆ ಪಣ ತೊಡೋಣ ಎಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಬಿ ಆರ್ ರವಿ ಕುಮಾರ್ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಹೊಸದುರ್ಗ ಹಾಲು ಶೀತಲೀಕರಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ
ಬಳಿಕ ಮಾತನಾಡಿದ ಅವರು ದೇಶಾಭಿಮಾನದ ಕಿಚ್ಚು ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಾಗಿದ್ದು. ರಾಗಿ ಬೀಸುವಾಗಲೂ ದೇಶಭಕ್ತಿ ಗೀತೆಗಳು ಮೊಳಗುತ್ತಿದ್ದವು. ವೀರ ಸೇನಾನಿಗಳು ವೀರಮರಣ ಅಪ್ಪಿದರು. ಸತ್ಯಾಗ್ರಹ ಶಿಬಿರಗಳು ಸ್ವಾತಂತ್ರ ಹೋರಾಟ, ಶಿಸ್ತು, ಶಾಂತಿ, ಸಂಯಮ ಮತ್ತು ಹೋರಾಟದ ತರಬೇತಿ ಕೇಂದ್ರಗಳಾಗಿದ್ದವು. ಹೊಸದುರ್ಗ, ಕೊಳಹಾಳು ಹಾಗೂ ಬಾಗೂರು ಗ್ರಾಮ ಸೇರಿದಂತೆ ಜಿಲ್ಲೆಯ ಸತ್ಯಾಗ್ರಹ ಕೇಂದ್ರಗಳು, ಸ್ವತಂತ್ರ ಸೇನಾನಿಗಳ ಬೀಡಾಗಿದ್ದವು.

ಗೋ ಸೇವೆಯೇ ಗೋಪಾಲ ಸೇವೆ ಎಂದು ಭಾವಿಸಿ ರೈತರ ಮತ್ತು ಹಾಲು ಉತ್ಪಾದಕರ ಹಿತ‌ ಕಾಪಾಡಲು ಯಾವುದೇ ಸಮಯದಲ್ಲಿ ಎಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಬದ್ಧವಾಗಿರುತ್ತೇನೆ. ಹೈನುಗಾರಿಕೆಯಿಂದ ಸಾಕಷ್ಟು ಕುಟುಂಬಗಳು ಜೀವನ ರೂಪಿಸಿಕೊಂಡಿವೆ. ಹಾಲು ಉತ್ಪಾದನೆಯಲ್ಲಿ ಹೊಸದುರ್ಗ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ. ರೈತರ ಹೈನುಗಾರಿಕೆ ಹೆಚ್ಚಿಸಲು ಶಿಮುಲ್ ಒಕ್ಕೂಟದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೊಸದುರ್ಗ ವಿಸ್ತರಣಾಧಿಕಾರಿ ಜಿ. ರವಿಚಂದ್ರ, ಎಸ್. ವಿನುತ್ ಕುಮಾರ್, ರಂಗಯ್ಯ, ಎ. ರಂಗಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;