ಹೊನ್ನಾಳಿ :ಹಿರೇಕಲ್ಮಠದಲ್ಲಿ ಇಂದು ಭಾವೈಕ್ಯತೆ ಮೆರೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
ಶ್ರೀ ಶ್ರೀ ಡಾ!! ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮುಲಕ ಉದ್ಘಾಟಿಸಿ
ಮಕ್ಕಳಿಗೆ ಅಕ್ಷರಭ್ಯಾಸವನ್ನು ಮಾಡಿಸಿದರು
ಶ್ರಾವಣ ಮಾಸದಲ್ಲಿ ಮಕ್ಕಳಿಗೆ ಪುರಾಣ ಪುಣ್ಯ ಕಥೆಗಳನ್ನು ತಿಳಿಸಿಕೊಡಬೇಕು ,
ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ಬಾಲ್ಯದಲ್ಲಿಯೇ ಪೋಷಕರು ಮತ್ತು ಶಿಕ್ಷಕರು ಕೊಡಬೇಕು ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಧರ್ಮ ಸ್ಥಾಪನೆಗೋಸ್ಕರ ಶ್ರೀ ಕೃಷ್ಣ ಜನ್ಮ ವಾಗಿದ್ದು ಎಂದರು
ಶ್ರೀ ಕೃಷ್ಣ ತುಂಟಾಟ ಮಾಡುವುದು ಅಷ್ಟೇ ಅಲ್ಲ ಹೆಣ್ಣುಮಕ್ಕಳ ರಕ್ಷಣೆ ಮಾಡುತ್ತಿದ್ದರು
ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಶ್ರೀ ಕೃಷ್ಣ ರಕ್ಷಣೆಯನ್ನು ಮಾಡಿದ್ದಲ್ಲದೆ ನರಕಾಸುರನ ಸಂಹಾರ ಮಾಡಿ 16 ಸಾವಿರ ಮಹಿಳೆಯರನ್ನು ರಕ್ಷಿಸಿ ಸಮಾಜದಲ್ಲಿ ಅವರದೇ ಆದ ಸ್ಥಾನಮಾನಗಳನ್ನ ಉಳಿಸಿಕೊಟ್ಟಂತಹ ದೇವರು ಎಂದು ವಿದುಷಿ ಡಾ. ಪ್ರತಿಮಾ ನಿಜಗುಣ ಶಿವಯೋಗಿ ಸಂಸ್ಕೃತ ಶಿಕ್ಷಕಿ ಹೇಳಿದರು
ಶಿಕ್ಷಕರನ್ನು ನೋಡಿ ವಿದ್ಯಾರ್ಥಿಗಳು ಅನುಸರಿಸುತ್ತಾರೆ ಒಬ್ಬ ವಿದ್ಯಾರ್ಥಿಯನ್ನು ಪರಿಪೂರ್ಣ ಉತ್ತಮ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡಲು ಶಿಕ್ಷಕರ ಪಾತ್ರ ಹೆಚ್ಚಿನದಾಗಿರುತ್ತದೆ ಎಂದು ವೇ/ಪಂ//ಶಿವರಾಜ ಶಾಸ್ತ್ರಿಗಳು ರಾಂಪುರ,ತಾವರೆಕೆರೆ ಕುಷ್ಟಗಿ ಹೇಳಿದರು
ಕಾರ್ಯಕ್ರಮದಲ್ಲಿ
ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ,
ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮಿ ಇಂಗ್ಲೀಷ್ ಮೀಡಿಯಂ ಹಿರಿಯ ಪ್ರಾಥಮಿಕ ಶಾಲೆ
ಶ್ರೀ ಅಕ್ಕಮಹಾದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ
ಮಕ್ಕಳು ಪೋಷಕರು
ಮುಖ್ಯೋಪಾಧ್ಯಾಯಿನಿ ಜ್ಯೋತಿ ಸಹ ಶಿಕ್ಷಕಿಯರು ಮತ್ತು ಪೊಷಕರು ಭಾಗವಹಿಸಿದ್ದರು..

ವರದಿಗಾರರು…ರೇಖಾ ಲಿಂಗಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
