;

ಮಾಜಿ ಶಾಸಕರಾದ ದಿ. ಎನ್. ಟಿ. ಬೊಮ್ಮಣ್ಣನವರು ಅಂದು ಕಂಡ ಕನಸು ನಾವು ಇಂದು ಸಕಾರ ಡಾ. ಶ್ರೀನಿವಾಸ್ ಎನ್. ಟಿ…!!!

ಮಾಜಿ ಶಾಸಕರಾದ ದಿ. ಎನ್. ಟಿ. ಬೊಮ್ಮಣ್ಣನವರು ಅಂದು ಕಂಡ ಕನಸು ನಾವು ಇಂದು ಸಕಾರ ಡಾ. ಶ್ರೀನಿವಾಸ್ ಎನ್. ಟಿ

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ;15-08-2025 ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚು ವರಿ ಕೊಠಡಿ ಹಾಗೂ ಪ್ರಯೋಗಾಲಯ ಕಟ್ಟಡಗಳ ಭೂಮಿ ಪೂಜೆಯನ್ನು( 4 ಕೋಟಿ) ನೆರವೇರಿಸಿದರು. ಹಾಗೆಯೇ ಕೊಠಡಿಗಳ ದುರಸ್ಥಿ ಮತ್ತು ನವೀಕರಣ ಕಾಮಗಾರಿ( 150 ಲಕ್ಷಗಳು)ಯನ್ನು ಲೋಕಾರ್ಪಣೆ ಮಾಡಿದರು. ಮಾನ್ಯ ಶಾಸಕರು ಮಾತನಾಡುತ್ತಾ, ಮಾಜಿ ಶಾಸಕರಾದ ದಿ. ಎನ್. ಟಿ. ಬೊಮ್ಮಣ್ಣನವರು ಅಂದು ( 1994) ಕಂಡ ಕನಸ್ಸನ್ನು ನಾವು ಇಂದು ಸಕಾರ ಗೊಳಿಸುತ್ತಿದ್ದೇವೆ ಎಂದರು. ಹಳ್ಳಿಗಾಡಿನಿಂದ ಬರುವ ನಮ್ಮ ಹೆಣ್ಣು ಮಕ್ಕಳು ಬಾಲ್ಯ ವಿವಾಹ ಮತ್ತು ವಿಧವಾ ಪದ್ದತಿ ಸಮಸ್ಯೆಗಳನ್ನು ಮೆಟ್ಟು ನಿಂತು ಶಿಕ್ಷಣ ಪಡೆಯಲು ಆಸಕ್ತಿಯಿಂದ ಬರುತ್ತಿದ್ದಾರೆ. ನಮ್ಮ ಹಳ್ಳಿಗಳು ಹಾಗೂ ಪಟ್ಟಣದ ಮಕ್ಕಳು ದೇಶದ ವಿವಿಧ ಮೂಲೆಗಳಲ್ಲಿ ಇತರರೊಂದಿಗೆ ಸ್ಪರ್ಧೆ ಮಾಡಿ ದೇಶದ ಭವಿಷ್ಯತ್ತಿನ ಪ್ರಜೆಗಳಾಗಿ ಬಾಳುವಂತೆ ಅವರ ಭೌದ್ದಿಕತೆಯ ಆಲೋಚನೆಯ ಕ್ರಮವನ್ನು ಸುಧಾರಿಸಲು ಪ್ರಾಧ್ಯಾಪಕರು ಶ್ರಮಿಸಬೇಕು ಎಂದರು. ಕುಂದುಕೊರತೆಗಳನ್ನು ಆಲಿಸಿದ ಶಾಸಕರು ಬಗೆಹರಿಸುವುದಾಗಿ ತಿಳಿಸಿದರು. ಕೂಡ್ಲಿಗಿ ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪ, ಉಪಾಧ್ಯಕ್ಷರು, ಸರ್ವ ಸದಸ್ಯರು, ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷರಾದ ಬೋಸಯ್ಯ, ಉಪಾಧ್ಯಕ್ಷರಾದ ಮಹಾದೇವಯ್ಯ, ಮುಖಂಡರು, ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು…

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;