;

ಹದಗೆಟ್ಟ ಹಗರಿಬೊಮ್ಮನಹಳ್ಳಿ ರಸ್ತೆಗಳು ಕಚೇರಿಯ ನಾಮಫಲಕ್ಕೆ ಸೀಮಿತವಾದ ಪಿಡಬ್ಲ್ಯೂಡಿ ಇಲಾಖೆ…!!!

ವರದಿಗಾರರು ಏಳು ಕೋಟಿ ದೂಪದಹಳ್ಳಿ
“ಹದಗೆಟ್ಟ ಹಗರಿಬೊಮ್ಮನಹಳ್ಳಿ ರಸ್ತೆಗಳು ಕಚೇರಿಯ ನಾಮಫಲಕ್ಕೆ ಸೀಮಿತವಾದ ಪಿಡಬ್ಲ್ಯೂಡಿ ಇಲಾಖೆ
“ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಬಹುತೇಕ ರಸ್ತೆಗಳು ಸ್ಮಶಾನದ ಗುಂಡಿಗಳಾಗಿ ಮಾರ್ಪಟ್ಟಿವೆ ಇಲ್ಲಿ ನಾಮಕ ಅವಸ್ಥೆ ಗೆ ಸೀಮಿತವಾದ ಲೋಕೋಪಯೋಗಿ ಇಲಾಖೆ ರಸ್ತೆಗಳ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸವೇ ಸರಿ ತಾಲೂಕಿನ ಬಹುತೇಕ ರಸ್ತೆಗಳಿಗೆ ವಾರ್ಷಿಕ ನಿರ್ವಹಣೆ ಅನುದಾನ ಬಿಡುಗಡೆಗೊಂಡಿದ್ದರು ನೆಪ ಮಾತ್ರಕ್ಕೆ ಗುತ್ತಿಗೆದಾರರು ಜಂಗಲ್ ಕಟಿಂಗ್ ಮಾಡಿ ಗುಂಡಿಗಳಿಗೆ ಪ್ಯಾಚ್ ವರ್ಕ್ ಮಾಡದಿರುವುದು ತಾಲೂಕಿನ ಜನತೆಯ ದುರ್ದೈವ. ರಾಜ್ಯ ಹೆದ್ದಾರಿಯಾದ ಎಸ್ ಹೆಚ್ 131 ಮತ್ತು ಎಸ್ ಹೆಚ್ 50 ರಸ್ತೆಗಳ ಸ್ಥಿತಿ ಹೇಳುತಿರ ದಾಗಿದೆ ಈ ರಸ್ತೆಗಳಿಗೆ ವಾರ್ಷಿಕ ನಿರ್ವಹಣೆ ವೆಚ್ಚ ಬಿಡುಗಡೆಯಾಗಿದ್ದರು ನೆಪ ಮಾತ್ರಕ್ಕೆ ಅಲ್ಲೊಂದು ಇಲ್ಲೊಂದು ಗುಂಡಿಗೆ ಮಣ್ಣು ಹಾಕುವುದರ ಮೂಲಕ ಕೈ ತೊಳೆದುಕೊಂಡಿದ್ದಾರೆ ಇಲ್ಲಿನ ಅಧಿಕಾರಿಗಳನ್ನು ವಿಚಾರಿಸಿದರೆ ಕಮಿಷನ ನೆಪ ಹೇಳಿಕೊಂಡು ನುಣಚಿಕೊಳ್ಳುತ್ತಿದ್ದಾರೆ ಅಂತೂ ಇಂತೂ ದಿನ ಬೆಳಗಾದರೆ ಸಾಕು ಶಾಲಾ ಕಾಲೇಜುಗಳಿಗೆ ತೆರಳೋ ವಿದ್ಯಾರ್ಥಿಗಳ ಗೋಳು ಹೇಳತಿರ ದಾಗಿದೆ.
ಹಗರಿಬೊಮ್ಮನಹಳ್ಳಿ ತಾಲೂಕು ಆಸ್ಪತ್ರೆಗೆ ಹೆರಿಗೆಗೆ ಹೋಗುವ ಮಹಿಳೆಯರಿಗೆ ಗುಂಡಿಗಳನ್ನು ನೋಡಿ ಭಯಭೀತರಾಗಿ ಮಾರ್ಗ ಮಧ್ಯದಲ್ಲಿ ಹೆರಿಗೆಯಾದರು ಆಶ್ಚರ್ಯ ಪಡಬೇಕಾಗಿಲ್ಲ. ಆದ್ದರಿಂದ ಆರಂಭದಲ್ಲೇ ಸ್ವಾಭಿಮಾನದ ಹೆಸರೇಳಿಕೊಂಡು ಗೆದ್ದು ಬಂದ ಶಾಸಕರು ಸ್ವಾಭಿಮಾನಕ್ಕೆ ಬೆಲೆಕೊಟ್ಟ ಜನರಿಗೆ ಅಭಿವೃದ್ಧಿಯ ಆದಿ ತೋರದಿರುವುದು ದುರಂತವೇ ಸರಿ ಹಗರಿಬೊಮ್ಮನಹಳ್ಳಿ ಸ್ವಾಭಿಮಾನ ಮತದಾರರಿಗೆ ದಿಕ್ಕು ತೋರದೆ ಕಂಗಲಾಗಿ ಹೋಗಿರುವುದು ಸತ್ಯ ಆದ್ದರಿಂದ ಈ ಭಾಗದ ಶಾಸಕರು ಮತದಾರ ಸ್ವಾಭಿಮಾನಕ್ಕೆ ಧಕ್ಕೆ ಆಗದ ರೀತಿಯಲ್ಲಿ ರಸ್ತೆಗಳ ಸ್ವಾಭಿಮಾನದ ತಗ್ಗುಂಡಿಗಳಿಗೆ ಗಮನ ಹರಿಸಲಿ ಎಂಬುದು ಇಲ್ಲಿನ ಮತದಾರರ ಅಭಿಪ್ರಾಯವಾಗಿದೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;