;

ಮರಾಠ. ಹದಗೆಟ್ಟ ಮುಖ್ಯರಸ್ತೆಗೆ ಮುಕ್ತಿ ಎಂದು? ಶಾಸಕರು ಭೂಮಿಪೂಜೆ ಮಾಡಿ ತಿಂಗಳಾದರೂ ಆರಂಭವಾಗದ ರಸ್ತೆ ಕಾಮಗಾರಿ ಕ್ಯಾರೇ ಅನ್ನದ ಸಚಿವರು ಶಾಸಕರು…!!!

ಮರಾಠ. ಹದಗೆಟ್ಟ ಮುಖ್ಯರಸ್ತೆಗೆ ಮುಕ್ತಿ ಎಂದು?

ಶಾಸಕರು ಭೂಮಿಪೂಜೆ ಮಾಡಿ ತಿಂಗಳಾದರೂ ಆರಂಭವಾಗದ ರಸ್ತೆ ಕಾಮಗಾರಿ

ಶಾಸಕರು ಸಚಿವರಿಗೆ ಕ್ಯಾರೆ ಎನ್ನುತ್ತಿಲ್ಲ ಗುತ್ತಿಗೆದಾರರು

ವರದಿ..ಅನಿಲ್ ಕುಮಾರ್

ಸಿರವಾರ..ಕಳೆದ ಹಲವು ವರ್ಷಗಳಿಂದ ಮರಾಠ ಮುರ್ಕಿಗುಡ್ಡ ರಸ್ತೆ ಇದ್ದ ಸ್ಥಿತಿಯಲ್ಲಿಯೇ ಇದೆ. ಸಂಪೂರ್ಣ ಹದಗೆಟ್ಟು ಹೋಗಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಅಷ್ಟೇ ಅಪಾಯಕಾರಿ ಆಗಿದೆ. ಹಾಗೂ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ಬಂದಿದೆ

ವಾಹನಗಳ ಸಂಚಾರಕ್ಕೂ ಅಷ್ಟೇ ತೊಂದರೆ ಇದೆ. ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಗುಂಡಿಗಳಿವೆ. ಅದರಲ್ಲಿ ನೀರು ನಿಂತಿದೆ. ಬೈಕ್ ಸವಾರರಂತೂ ಸರ್ಕಸ್ ಮಾಡುತ್ತ ಸಾಗಬೇಕಿದೆ.

ಪಾದಚಾರಿಗಳಿಗೆ ಹೋಗಲು ಸಾಧ್ಯವಿಲ್ಲದ ದುಃಸ್ಥಿತಿ ಇದೆ. ಇಷ್ಟೆಲ್ಲ ತೊಂದರೆಗಳನ್ನು ಸಾರ್ವಜನಿಕರು ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ಈ ರಸ್ತೆಗೆ ಮುಕ್ತಿ ಯಾವಾಗ? ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಈ ರಸ್ತೆ ಕಾಮಗಾರಿಗೆ ಟೆಂಡರ್ ಆಗಿ ಅದೆಷ್ಟೋ ತಿಂಗಳೇ ಗತಿಸಿವೆ. ಅದಾದ ಅಷ್ಟೋ ತಿಂಗಳ ನಂತರ ಮತಕ್ಷೇತ್ರದ ಮಾನ್ವಿ ಕ್ಷೇತ್ರದ ಶಾಸಕರು ಜಿ ಹಂಪಯ್ಯ ನಾಯಕ್ ಹಾಗೂ ಸಚಿವರು ಎನ್ ಎಸ್ ಬೋಸರಾಜ್ ಕಾಮಗಾರಿ ಭೂಮಿಪೂಜೆ ಮಾಡಿ ತಿಂಗಳೇ ಆಗಿದೆ. ಆದರೂ ಕಾಮಗಾರಿ ಪ್ರಾರಂಭವಾಗುತ್ತಿಲ್ಲ.

ಮರಾಠ ಮುರ್ಕಿಗುಡ್ಡ ನಾರ್ ಬಂಡ ಆಲ್ಕೋಡ ಗಲಗ್ ಗ್ರಾಮಕ್ಕೆ ಹೋಗುವ ಹಲವು ಗ್ರಾಮಗಳ ರಸ್ತೆಯಾಗಿದ್ದು

ಕೆಕೆಆರ್‌ಡಿಬಿ ಯೋಜನೆ ಅಡಿ ಕಾಮಗಾರಿ ನಿರ್ಮಿಸಲು 2 ಕೋಟಿ ವೆಚ್ಚದಲ್ಲಿ ಸಿರವಾರ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಮರಾಠ ಗ್ರಾಮದ ಬ್ರಿಜ್ ವರೆಗೆ ಕಾಮಗಾರಿ ನಿರ್ವಹಿಸಲು ಅಂದಾಜು ಪತ್ರಿಕೆ ಸಿದ್ದ ಮಾಡಿ ಭೂಮಿ ಪೂಜೆ ಮಾಡಿದರು ಇದುವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ

2 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಡೆಯ ಬೇಕಿದೆ. ರಸ್ತೆ ಕಾಮಗಾರಿ ಪ್ರಾರಂಭಿಸುವ ಮುನ್ನ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವ ಕಾರ್ಯ ಈಗಾಗಲೇ ಮುಗಿಯಬೇಕಿದ್ದರೂ ಗುತ್ತಿಗೆದಾರ ಯಾವ ಕೆಲಸಕ್ಕೂ ಮುಂದಾಗಲಿ ನಿದ್ದೆಗೆ ಜಾರಿದಂತೆ ಕಾಣುತ್ತದೆ .

ಈಗ ಮಳೆಗಾಲದಲ್ಲಿ ಈ ರಸ್ತೆಯಲ್ಲೆಲ್ಲ ಗುಂಡಿಗಳಲ್ಲಿ ನೀರು ನಿಂತು ಸಾರ್ವಜನಿಕರು ತುಂಬಾ ತೊಂದರೆಪಡುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದರೆ ‘ನನ್ನ ಕೆಲಸ ನಾನು ಮಾಡಾಗಿದೆ. ಇನ್ನು ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸಬೇಕು
ಅವರು ಯಾಕೆ ವಿಳಂಬ ಮಾಡುತ್ತಿದ್ದಾರೆ ನನಗೆ ತಿಳಿಯದು’ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ
. ರಸ್ತೆ ಕಾಮಗಾರಿ ಭೂಮಿಪೂಜೆ ಮಾಡಿದರೆ ಸಾಲದು ಕಾಮಗಾರಿ ಶುರು ಆಗಬೇಕು. ಈ ಬಗ್ಗೆ ಶಾಸಕರು ಇತ್ತ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend