ಪಟ್ಟಣದ ಹಳೆ ಊರಿನ ರುದ್ರಭೂಮಿಗೆ ಹದ್ದುಬಸ್ತು ಮಾಡಿಕೊಡಲು ತಹಶಿಲ್ದಾರರಿಗೆ ಮನವಿ
ಮರಿಯಮ್ಮನಹಳ್ಳಿ : ಪಟ್ಟಣದ ಹಳೆ ಊರಿನ ರುದ್ರಭೂಮಿಗೆ ಹದ್ದು ಬಸ್ತು ಮಾಡಿಕೊಡುವಂತೆ ಹೊಸಪೇಟೆ ತಹಶಿಲ್ದಾರ ಅವರು ಸೂಚಿಸಿದ್ದರೂ ನಾಡಕಾರ್ಯಾಲಯ ಕ್ರಮ ಕೈಗೊಂಡಿಲ್ಲ ಅದಕ್ಕೆ ಹದ್ದುಬಸ್ತು ಮಾಡಿ ಸೂಕ್ತ ರಕ್ಷಣೆ ನೀಡುವಂತೆ ಮತ್ತೊಮ್ಮೆ ಹೊಸಪೇಟೆ ತಹಶಿಲ್ದಾರರಿಗೆ ಸಾರ್ವಜನಿಕರು ಶುಕ್ರವಾರ ಮನವಿ ಸಲ್ಲಿಸಿದರು.
ವೆಂಕಟಾಪುರ ರಸ್ತೆಯಲ್ಲಿ ಬರುವ ಈ ರುದ್ರಭೂಮಿಗೆ ಅಧಿಕೃತ ದಾಖಲೆಗಳಿಲ್ಲ ಈ ಕುರಿತು ತಹಶಿಲ್ದಾರರಿಗೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ತಹಶಿಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕ್ಕೆ ಸಂಬoಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಹಲವು ತಿಂಗಳಾದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಕೆಲವರು ಸಮಾಧಿಗಳ ಮೇಲೆಯೇ ಕಲ್ಲು ಬಂಡೆಗಳಾಕಿ ಮುಚ್ಚಿ ಗುಡಿಸಲು ಕಟ್ಡಿಕೊಳ್ಳುತ್ತಿರುವುದು ಬೇಸರ ತಂದಿದೆ ಇಲ್ಲಿ ನಮ್ಮ ಪೂರ್ವಿಕರ ಸಮಾದಿಗಳಿದ್ದು ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ.
ಈ ರೀತಿ ನಡೆಯುವುದನ್ನು ತಡೆದು ಹದ್ದು ಬಸ್ತು ಮಾಡಿ ಸೂಕ್ತ ರಕ್ಣಣೆ ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಹಳೆ ಊರಿನ 14 ಮತ್ತು 15ನೇ ವಾರ್ಡಿನ ನಾಗರಿಕರು ಉಪಸ್ಥಿತಿ ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
