;

ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಕಟ್ಟಡದ ಚೈನ್ ಲಿಂಕ್ ಫೆನ್ಸಿಂಗ್ ಕಾಮಗಾರಿಯ ಭೂಮಿಪೂಜೆ…!!!

ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಕಟ್ಟಡದ ಚೈನ್ ಲಿಂಕ್ ಫೆನ್ಸಿಂಗ್ ಕಾಮಗಾರಿಯ ಭೂಮಿಪೂಜೆ

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ. ಅವರು ದಿನಾಂಕ; 18-07-2025 ರಂದು ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಕಟ್ಟಡದ ಚೈನ್ ಲಿಂಕ್ ಫೆನ್ಸಿಂಗ್ ಒದಗಿಸುವ( 28 .ಲಕ್ಷಗಳು)ಕಾಮಗಾರಿಯ ಭೂಮಿಪೂಜೆಯನ್ನು ನೆರವೇರಿಸಿದ ಬಳಿಕವೂ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಆದಿನಾಯಕಿಯಾದ ಶ್ರೀಮತಿ ಇಂದಿರಾ ಗಾಂಧಿ ಅವರು ಭೇಟಿ ನೀಡಿದ( 1971) ಗ್ರಾಮ ಇದಾಗಿದ್ದು, ತಮ್ಮ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಸರ್ವ ರೀತಿಯಲ್ಲಿ ಚಿಕ್ಕಜೋಗಿಹಳ್ಳಿ ಗ್ರಾಮದ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದೂ ಹೇಳಿದರು.
ವಿಜಯ ನಗರ ಜಿಲ್ಲೆಯ ತೋಟಗಾರಿಕೆಯ ಉಪ ನಿರ್ದೇಶಕರಾದ ಚಿದಾನಂದಪ್ಪ ಪಿ, ಹಿರಿಯ ಸಹಾಯಕ ತೋಟಗಾರಿಕೆಯ ನಿರ್ದೇಶಕರಾದ ವಿಜಯ ನಿಚ್ಚಾಪುರ, ರಾಜ್ಯ ವಲಯ, ಪಿಡಬ್ಲ್ಯೂಡಿ ನಾಗನಗೌಡ, ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷರಾದ ಬೋಸಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶೋಕ ನಾಯ್ಕ, ಮುಖಂಡರಾದ ಮೊಹಮ್ಮದ್ ಹನೀಪ್, ರಾಜೇಶ್ ನಾಯ್ಕ, ಪೇಯಿಂಟ್ ತಿಪ್ಪೇಸ್ವಾಮಿ, ಬುಡ್ಡಾರೆಡ್ಡಿ, ಹಿರಿಯರು ಮತ್ತು ಗ್ರಾಮಸ್ಥರು ಇದ್ದರು…

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;