;

ಕಲ್ಯಾಣ ಕರ್ನಾಟಕ ಮತ್ತು ಗಣಿ ಬಾಧಿತ ಅನುದಾನದಲ್ಲಿ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳಿಗೆ ಆದ್ಯತೆ…!!!

ಕಲ್ಯಾಣ ಕರ್ನಾಟಕ ಮತ್ತು ಗಣಿ ಬಾಧಿತ ಅನುದಾನದಲ್ಲಿ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳಿಗೆ ಆದ್ಯತೆ

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿನಾಂಕ; 18-07-2025 ರಂದು ಎಂ.‌ಬಿ.‌ಅಯ್ಯನಹಳ್ಳಿ ಗ್ರಾಮದ ಉನ್ನತೀಕರಣ ( 09.90 ಲಕ್ಷಗಳು), ಸ.ಹಿ. ಪ್ರಾ ಶಾಲೆ ನೂತನ ಕಟ್ಟಡ ನಿರ್ಮಾಣ ( 20 .00 ಲಕ್ಷಗಳು), ಚಿಕ್ಕಜೋಗಿಹಳ್ಳಿ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಉನ್ನತೀಕರಣ( 47.10 ಲಕ್ಷಗಳು)
ಕಾಮಗಾರಿಗಳನ್ನು ನೇರವೇರಿಸಿದ ಬಳಿಕ ಮಾತನಾಡುತ್ತಾ, ಕಲ್ಯಾಣ ಕರ್ನಾಟಕ ಮತ್ತು ಗಣಿ ಬಾದಿತ ಪ್ರದೇಶದ ವಿಶೇಷ ಅನುದಾನದಿಂದ ನಮ್ಮ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯಾಗುವ ನಿಟ್ಟಿನಲ್ಲಿ ಅನುದಾನವನ್ನು ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದರು. ಹೀಗಾಗಿ ಈ ವಿಶೇಷ ಅನುದಾನವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಬರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು. ಬೇದ ಭಾವ ಮಾಡದೇ ಎಲ್ಲ ಸರ್ಕಾರಿ ಶಾಲೆಗಳನ್ನು ಉನ್ನತೀಕರಣ ಮಾಡುತ್ತೇವೆ ಎಂದರು. ಆದುದರಿಂದ ಈ ಅನುದಾನವನ್ನು ದೇವಸ್ಥಾನಗಳಿಗೆ ಬಳಸಲು ಬರುವುದಿಲ್ಲ. ಎಂ ಬಿ ಅಯ್ಯನಹಳ್ಳಿ ಮತ್ತು ಶಾಂತನಹಳ್ಳಿ ಗ್ರಾಮಗಳ ನಡುವಿನ ರಸ್ತೆಯ ಅಗಲೀಕರಣವನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ ಎಂದರು. ನಮ್ಮಲ್ಲಿ ಎಂ.ಬಿ. ಅಯ್ಯನಹಳ್ಳಿ ಮುಖ್ಯ ಕೇಂದ್ರವಾಗಿರುವುದರಿಂದ ಕಂದಾಯ, ಪಂಚಾಯತಿ ಮತ್ತು ಪೊಲೀಸ್ ವ್ಯವಸ್ಥೆಯನ್ನು ಭೌಗೋಳಿಕ ದೃಷ್ಟಿಯಿಂದ ಹಂತರವನ್ನು ತಗ್ಗಿಸುತ್ತೇವೆ ಎಂದರು.‌ ಮುಖಂಡರಿಂದ ಮನವಿಯನ್ನು ಸ್ವೀಕರಿಸಿದ ಬಳಿಕವೂ, ನಿಮ್ಮ ತಾಳ್ಮೆ – ಸಹಕಾರ ಅಗತ್ಯ ಎಂದರು.
ಎಇಇ ಮಲ್ಲಿಕಾರ್ಜುನ, ಇಒ ನರಸಪ್ಪ, ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷರಾದ ಬೋಸಯ್ಯ, ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಭಾಗ್ಯಮ್ಮ ಲೋಕಣ್ಣ ಹಾಗೂ ಅಶೋಕ, ಪಿಡಿಒ ಶಾಂತಕುಮಾರಿ, ಗ್ರಾ. ಪಂ.‌ ಸದಸ್ಯರಾದ ಸೊಸೈಟಿ ಸಿದ್ದಪ್ಪ, ಮುಖಂಡರಾದ ಅಜ್ಜನಗೌಡ, ರಂಗಪ್ಪ, ರಾಮಣ್ಣ, ನಾಗಣ್ಣ, ಯರಿಸ್ವಾಮಿ, ಬುಡ್ಡಾರೆಡ್ಡಿ, ಆರ್. ವಿ ತಿಪ್ಪೇಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ, ಗ್ರಾಮಸ್ಥರು ಮತ್ತಿತರರು ಇದ್ದರು…

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;