ಕೂಡ್ಲಿಗಿ ವಕೀಲರ ಕಾರ್ಯಕಾರಿ ಸಮಿತಿ ಚುನಾವಣೆ -ಅಧ್ಯಕ್ಷರಾಗಿ ಜಿ.ಹೊನ್ನೂರಪ್ಪ ಆಯ್ಕೆ- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜು 19ರಂದು ಜರುಗಿದ , ಕೂಡ್ಲಿಗಿ ನ್ಯಾಯಾಲಯದ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ. ಅಧ್ಯಕ್ಷರಾಗಿ ಹೋರಾಟಗಾರರು ಹಾಗೂ ಯುವ ಹಿರಿಯ ವಕೀಲರಾದ , ಜಿ.ಹೊನ್ನೂರಪ್ಪ ಆಯ್ಕೆಯಾಗಿದ್ದಾರೆ. ಜಿ.ಹೊನ್ನರಪ್ಪರವರು , ಕಳೆದ ಹಲವು ವರ್ಷಗಳ ಹಿಂದೆ ಸತತ ಎರೆಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಆಯ್ಕೆಯಾಗುವ ಮೂಲಕ , ಮೂರನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ. ಇದು ಕೂಡ್ಲಿಗಿಯ ವಕೀಲರ ಸಂಘದ ಎಲ್ಲಾ ಯುವ ವಕೀಲರ ಹೆಗ್ಗಳಿಗೆ , ಅಧ್ಯಕ್ಷ ಜಿ.ಹೊನ್ನೂರಪ್ಪರವರು ಪಾತ್ರರಾಗಿದ್ದಾರೆ. ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು , ಹಾಗೂ ವಿಜಯನಗರ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆ. ಸ.ಸಂ.ಉ.ನಿ.ಕಚೇರಿಯ , ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಜೆ.ಎಂ.ನಗರಾಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 5 ವರ್ಷಗಳ ಅವಧಿಗೆ ಜರುಗಿದ , ಕೂಡ್ಲಿಗಿ ತಾಲೂಕು ವಕೀಲರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಅಯ್ಕೆ ಚುನಾವಣೆಯಲ್ಲಿ. ಅಧ್ಯಕ್ಷರಾಗಿ ಯುವ ಹಿರಿಯ ವಕೀಲರಾದ ಜಿ.ಹೊನ್ನೂರಪ್ಪ , ಉಪಾಧ್ಯಕ್ಷರಾಗಿ ಉಜ್ಜಿನಿ ಮೂಲದ ಯುವ ಹಿರಿಯ ವಕೀಲರಾದ , ಟಿ.ಮಲ್ಲಿಕಾರ್ಜುನ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಹೋರಾಟಗಾರರು ಹಾಗೂ ಯುವ ಹಿರಿಯ ವಕೀಲರಾದ ಸಿ.ವಿರುಪಾಕ್ಷಪ್ಪರವರು ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಯಾಗಿ ದಲಿತ ಯುವ ಮುಖಂಡರು , ಹಾಗೂ ಯುವ ವಕೀಲರಾದ ಡಿ.ಹೆಚ್.ದುರುಗೇಶ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಹಿರಿಯ ಮಹಿಳಾ ವಕೀಲರಾದ , ಶ್ರೀಮತಿ ಕೆ.ಬಿ.ಸಾವಿತ್ರಿಬಾಯಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯುವ ಮಹಿಳಾ ವಕೀಲರಾದ ಡಿ. ಲಕ್ಷ್ಮೀದೇವಿ , ಹಾಗೂ ವಕೀಲರಾದ ಎಂ.ರಾಮಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನವಾಗಿ ಅಯ್ಕೆಯಾದ ಪದಾಧಿಕಾರಿಗಳಿಗೆ , ಕೂಡ್ಲಿಗಿ ವಕೀಲರ ಸಂಘದ ಹಿರಿಯ ವಕೀಲರು , ಸರ್ವ ಸದಸ್ಯರು. ಮಹಿಳಾ ವಕೀಲರು ಹಾಗೂ ಹಿರಿಯ ವಕೀಲರು ಯುವ ವಕೀಲರು , ನ್ಯಾಯಾಲಯದ ಅಧಿಕಾರಿಗಳು ಸರ್ವ ಸಿಬ್ಬಂದಿಯವರು. ಪತ್ರಕರ್ತರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿವಿದ ಸಮುದಾಯಗಳ ಪ್ರಮುಖರು , ವಿವಿದ ಪಕ್ಷಗಳ ಮುಖಂಡರು, ವಿವಿದ ಜನ ಪ್ರತಿನಿಧಿಗಳು , ಹೋರಾಟಗಾರರು, ಗಣ್ಯರು, ನಾಗರೀಕರು ಅಭಿನಂದಿಸಿ ಶುಭಕೋರಿದ್ದಾರೆ.

ವರದಿ… ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
