;

ಪ್ರತಿ ಹಳ್ಳಿಗಳ ಆರ್ಥಿಕ – ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ. ಶಾಸಕ- ಡಾ. ಶ್ರೀನಿವಾಸ್. ಎನ್. ಟಿ…!!!

ಪ್ರತಿ ಹಳ್ಳಿಗಳ ಆರ್ಥಿಕ – ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ. ಶಾಸಕ- ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ;18-07-2025 ರಂದು ವಲಸೆ ಗ್ರಾಮದಲ್ಲಿ ಸ.ಹಿ.ಪ್ರಾ. ಶಾಲೆ ಉನ್ನತೀಕರಣ( 10.50 ಲಕ್ಷಗಳು), ಕೆಳಗಿನ ಕರ್ನಾರಹಟ್ಟಿ ಗ್ರಾಮದಲ್ಲಿ ಸಿ. ಸಿ. ರಸ್ತೆ ನಿರ್ಮಾಣ( 10.00 ಲಕ್ಷಗಳು), ಮಡಕಲಕಟ್ಟೆ ಗ್ರಾಮದ ಸ.ಕಿ. ಪ್ರಾ. ಶಾಲೆಯ ಉನ್ನತೀಕರಣ( 10.60 ಲಕ್ಷಗಳು) ಹಾಗೂ ಸಿ.ಸಿ.‌ರಸ್ತೆ ( 20 ಲಕ್ಷಗಳು), ಹೊಸಹಟ್ಟಿ ಗ್ರಾಮದಲ್ಲಿ ಸ. ಕಿ. ಪ್ರಾ. ಶಾಲೆಯ ಉನ್ನತೀಕರಣ(14. 25 ಲಕ್ಷಗಳು)
ಹಾಗೂ ಸಿ.‌ಸಿ.ರಸ್ತೆ ನಿರ್ಮಾಣ ( 25 ಲಕ್ಷಗಳು) ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ, ಪ್ರಾದೇಶಿಕ – ಸಾಮುದಾಯಕವಾಗಿ ಭೇದ- ಭಾವ ಇಲ್ಲದಂತೆ ಪ್ರತಿ ಹಳ್ಳಿಗಳ ಸಾಮಾಜಿಕ -ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಇಲ್ಲಿನ ಹಳ್ಳಿಗಳ ಮನವಿಗಳನ್ನು ಸ್ವೀಕರಿಸಿದ ನಂತರ, ರಸ್ತೆ, ಚರಂಡಿ ಮತ್ತು ಸೇತುವೆಯ ಸಮಸ್ಯೆಗಳನ್ನು ಜಿಟಿ ಜಿಟಿ ಮಳೆಯ ನಡುವೆಯೂ ಪರಿಶೀಲಿಸಿ ತಕ್ಷಣ ಸ್ಪಂದಿಸಿದರು. ಪಿ ಡಬ್ಲ್ಯೂಡಿ ನಾಗನಗೌಡ, ಗ್ರಾ. ಪಂ.‌ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಕವಿತ, ಮುಖಂಡರಾದ ಓಂಕಾರಿ, ಸುರೇಶ, ಸಿದ್ದೇಶ, ತೋಟಿ ಪಾಪಣ್ಣ, ವೈ. ಬೋರಯ್ಯ, ಓಬಣ್ಣ, ಮಾರಪ್ಪ, ಕೃಷ್ಣಪ್ಪ, ಮಹೇಶ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು…

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;