;

ಮೊಳಕಾಲ್ಮುರು :-ಚಿತ್ರದುರ್ಗ ಅಖಂಡ ಬಳ್ಳಾರಿ ಮೊದಲ ಅಂತರ ಜಿಲ್ಲಾ ಕವಿಗೋಷ್ಠಿ…!!!

ಕನ್ನಡ ಸಾಹಿತ್ಯ ಪರಿಷತ್ ಚಿತ್ರದುರ್ಗ ಅಖಂಡ ಬಳ್ಳಾರಿ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಗಳ ವತಿಯಿಂದ ಮೊದಲ ಬಾರಿಗೆ ಮೊಳಕಾಲ್ಮುರು ತಾಲೂಕಿನ ರಾಂಪುರ ಗ್ರಾಮದ ಎಸ್ ಪಿ ಎಸ್ ಆರ್ ಪದವಿ ಪೂರ್ವ ಕಾಲೇಜ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ ಎಂ ಶಿವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಶಾಸಕರಾದ ಏನ್ ವೈ ಗೋಪಾಲಕೃಷ್ಣ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಜಯಪ್ರಕಾಶ್ ವಹಿಸಲಿದ್ದು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯಲ್ಲಪ್ಪ ಕೆ ಕೆ ಪುರ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಂಕರ್ ರೆಡ್ಡಿ ನಾಗವೇಣಿ ರವಿಕುಮಾರ್ ರುದ್ರಪ್ಪ ಇನ್ನಿತರರು ಭಾಗವಹಿಸಲಿದ್ದಾರೆ.
2025 ರ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಬಳ್ಳಾರಿಯ ಶಿವಲಿಂಗಪ್ಪ ರವರಿಗೆ ವಿಶೇಷ ಸನ್ಮಾನವನ್ನು ಹಮ್ಮಿಕೊಂಡಿದ್ದು ಚಿತ್ರದುರ್ಗ ಜಿಲ್ಲೆಯ ಕೆ ಉಮೇಶ್ ಎಸ್ ಆರ್ ತಿಪ್ಪೇಶ್ ಬಸವರಾಜ್ ಶಿವಯೋಗಿ ಸೇರಿದಂತೆ 15 ಜನ ಕವಿಗಳು ಬಳ್ಳಾರಿ ಜಿಲ್ಲೆಯಿಂದ 15 ಜನ ಕವಿಗಳು ಕವಿಗೋಷ್ಠಿಯನ್ನು ಭಾಗವಹಿಸಲಿದ್ದಾರೆ ಎಂದು ಕೆ ಎಂ ಶಿವಸ್ವಾಮಿ ಪತ್ರಿಕೆಗೆ ಮಾಹಿತಿ ನೀಡಿದರು…..

ವರದಿ, ಉಮೇಶ್ ಕೊಂಡ್ಲಹಳ್ಳಿ, ಮೊಳಕಾಲ್ಮುರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;