ವರದಿಗಾರರು ಏಳುಕೋಟಿ ದೂಪದಹಳ್ಳಿ
ಪತ್ರಕರ್ತ ಮಾಧ್ಯಮದವರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಬೇಕು. ನೇಮಿರಾಜ್ ನಾಯ್ಕ್
ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಕಾ ಪರಮೇಶ್ವರ್ ಕಲ್ಯಾಣ ಮಂಟಪದಲ್ಲಿ ನಡೆದ ಇಂದು ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಉದ್ಘಾಟನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ನೇಮಿರಾಜ್ ನಾಯ್ಕ್ ಅವರು ಪತ್ರಿಕಾ ವರದಿಗಾರರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳಾದ ಗೌರವಧನ ಮತ್ತು ವಯಸ್ಸಾದ ಪತ್ರ ಕರ್ತರಿಗೆ ಪಿಂಚಣಿ ಸೌಲಭ್ಯಗಳು ಸಿಗುವಂತಾಗಬೇಕೆಂದು ತಿಳಿಸಿದರು ಇದರ ಬಗ್ಗೆ ವಿಧಾನಸಭೆ ಕಳಪ ನಡೆಯುವ ಸಂದರ್ಭ ದಲ್ಲಿ ನಾವು ನಿಮ್ಮ ಪರವಾಗಿ ಮಾತನಾಡುತ್ತೇವೆ ಎಂದು ಭರವಸೆಯನ್ನು ನೀಡಿದರು 2008 ಮತ್ತು 2009 ನಾನು ಶಾಸಕನಾದ ಸಂದರ್ಭದಲ್ಲಿ ಕೆಚ್ಚಿನ ಬಂಡಿ ಗ್ರಾಮದಲ್ಲಿ 700 ರಿಂದ 800 ಮನೆಗಳಾಗುವಷ್ಟು ಅಥವಾ ನಿವೇಶನಗಳು ಕಟ್ಟಿಕೊಳ್ಳುವಷ್ಟು ಜಾಗವನ್ನು ಸರ್ಕಾರದ ಭೂಮಿಯನ್ನು ಹುಡುಕಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಕೆಲ ಅಧಿಕಾರಿಗಳುಇದರ ಬಗ್ಗೆ ಗಮನಹರಿಸದೆ ನನಗೂದಿಗೆ ಬಿದ್ದಿತ್ತು ಅದಕ್ಕೆ ಕೇಂದ್ರ ಸರ್ಕಾರದ ಯೋಜನೆಯಲ್ಲಿ ವಸತಿ ಮತ್ತು ಜಾಗ ಇಲ್ಲದವರಿಗೆ ಪುನರ್ವಸತಿ ಮತ್ತು ಜಾಗ ಕೊಡಿಸುವುದಕ್ಕಾಗಿ ಪುರಸಭೆ ವ್ಯಾಪ್ತಿಯಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ನಂತರ ಆರ್ ಕವಿತಾ ತಾಲೂಕು ದಂಡಾಧಿಕಾರಿಗಳು ಇವರು ಮಾತನಾಡಿ ಇವತ್ತಿನ ಕಾಲದಲ್ಲಿ ಪತ್ರಕರ್ತ ಕುಟುಂಬಗಳು ಜೀವನ ಮಾಡಲಿಕ್ಕೆ ತುಂಬಾ ತೊಂದರೆಯಲ್ಲಿವೆ ಮತ್ತು ಅವರು ಯಾವುದೇ ಸುದ್ದಿಯನ್ನು ಮಾಡಲಿಕ್ಕೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮತ್ತು ಎಲ್ಲರ ವಿರೋಧಿ ಆಗಬೇಕಾಗುತ್ತದೆ ಎಂದು ತಿಳಿಸಿದರು ಅದಕ್ಕೋಸ್ಕರ ಸರ್ಕಾರ ಈ ಪತ್ರಕರ್ತರಿಗೆ ಭದ್ರತೆ ಒದಗಿಸಿಕೊಳ್ಳಬೇಕೆಂದು ಮತ್ತು ನನ್ನ ವ್ಯಾಪ್ತಿಯಲ್ಲಿ ಏನು ಬರುತ್ತದೆ ಅದನ್ನು ಪ್ರಾಮಾಣಿಕವಾಗಿ ಪತ್ರಕರ್ತರಿಗೆ ತಲುಪಿಸುವಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಂತರ ನಿಂಗಪ್ಪಜ್ಜ ರಾಜ್ಯ ಪತ್ರಿಕಾ ಅಕಾಡೆಮಿ ಸದಸ್ಯರು ಮಾತನಾಡಿ ಪತ್ರಕರ್ತರಿಗೆ ಜೀವವಿಮೆ ಮಾಡಿಸಿ ಕೊಳ್ಳಲು ಮತ್ತು ಪತ್ರಿಕ ಮಾಧ್ಯಮದವರಿಗೆ ಎಸ್ ಇ ಪಿ ಮತ್ತು ಟಿ ಎಸ್ ಈ ಪಿ ಯ ಮೂಲಕ ಎಸ್ ಸಿ ಮತ್ತು ಎಸ್ ಟಿ ಪತ್ರಕರ್ತ ಮಾಧ್ಯಮದವರಿಗೆ ಮಾಧ್ಯಮ ಕಿಟ್ ಇದರಲ್ಲಿ ಲ್ಯಾಪ್ಟಾಪ್ ಫೋನು ಇನ್ನು ಮುಂತಾದವುಗಳನ್ನು ಇರುತ್ತವೆ ಇದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಹಗರಿಬೊಮ್ಮನಹಳ್ಳಿಯ ಪ್ರಜಾವಾಣಿ ವರದಿಗಾರರಾದ ಶಿವಾನಂದ ಇವರಿಗೆ ಕೊಡಿಸಲಾಗಿದೆ ಮತ್ತು ಬಸ್ ಪಾಸ್ ಮಾಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ್ ಇವರ ಜೊತೆ ಮಾತನಾಡಿ ಈ ಯೋಜನೆಗಳು ಸಿಗುವಂತೆ ಮಾಡುತ್ತೇವೆ ಎಂದು ತಿಳಿಸಿದರು ಇದರ ಪರಿಣಾಮವಾಗಿ ಪತ್ರಕರ್ತರಿಗೆ ಬಸ್ ಪಾಸ್ ಮಾಡಿಸುವ ಯೋಜನೆ ಚಾಲ್ತಿಯಲ್ಲಿ ಇರುತ್ತದೆ ಎಂದು ತಿಳಿಸಿದರು
ನಂತರ ಮೈಲೇಶ್ ಬೇವೂರ್ ಕ್ಷೇತ್ರಶಿಕ್ಷಣಾಧಿಕಾರಿಗಳು ಮಾತನಾಡಿ ಪತ್ರಕರ್ತರ ಬರವಣಿಗೆಯ ಮೂಲಕ ಸರ್ಕಾರವನ್ನು ಬೆಳಗಾಗುವುದರ ಒಳಗೆ ಕೆಡವಬಹುದು ಮತ್ತು ನಾವೇ ಪ್ರಾರಂಭಿಸಿರುವ ಬಣ್ಣದ ಗೆಜ್ಜೆ ಪತ್ರಿಕೆಯನ್ನು ಮಕ್ಕಳ ಬರವಣಿಗೆ ಕೌಶಲ್ಯ ಬೆಳೆಸುವುದರ ಮೂಲಕ ಬಸರಕೋಡು ವಿದ್ಯಾರ್ಥಿನಿ ಸೌಜನ್ಯ ಎಂಬ ವಿದ್ಯಾರ್ಥಿ ಒಂದು ಲೋಟದ ಕಥೆ ಪ್ರಬಂಧವನ್ನು ಬರೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು
ನಂತರ ಎಲ್ಲಾ ಗ್ರಾಮ ಪಂಚಾಯತಿಯ ಸ್ವಚ್ಛತೆ ಕಾರ್ಯ ಮಾಡುವವರನ್ನು ಮತ್ತು ಕರ ವಸಲೆಗಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಮತ್ತು ಹಗರಿಬೊಮ್ಮನಹಳ್ಳಿ ದರ್ಶನ್ ಹೋಟೆಲ್ ಮಾಲೀಕರಾದ ಗಂಗಣ್ಣ ಇವರನ್ನು ಸನ್ಮಾನಿಸಲಾಯಿತು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
