ಸುಳ್ಳು ಸುದ್ದಿ:ಸಿಂಹ ಬಂತು..ಸಿಂಹ…, ಇದು ಸುಳ್ಳು ಸುದ್ದಿ ಭಯ ಬೇಡ ಅರಣ್ಯ ಇಲಾಖೆ-ಸ್ಪಷ್ಟನೆ… ವಿಜಯನಗರ ಜಿಲ್ಲೆ ಕೂಡ್ಲಿಗಿ: ಸಿಂಹ ಬಂತು..ಸಿಂಹ…ಎಂದು, ಪಟ್ಟಣ ಸೇರಿದಂತೆ ತಾಲೂಕಿನ ಅಸಂಖ್ಯಾತ ಜನರ. ಮೊಬೈಲ್ ಗಳಲ್ಲಿನ ವಾಟ್ಸಾಪ್ ನಲ್ಲಿ, ಇಲ್ಲಿ ತೋರಿಸಲಾಗಿರುವ ಸಿಂಹ ಇರೋ ಕೆಲ ಹೊತ್ತಿನ ವೀಡಿಯೋ ಕಾಣಸಿಗುತ್ತದೆ. ಈ ವೀಡಿಯೋ ಅನ್ನು ನೋಡಿದಾಕ್ಷಣ.. ಕೂಡ್ಲಿಗಿ ತಾಲೂಕಿನ ಗುಂಡಿನ ಹೊಳೆ ಬೀಜೋತ್ಪನ್ನ ಕೇಂದ್ರದ ಬಳಿ, ಸಂಡೂರು ತಾಲೂಕಿನ ಹುಚ್ಚೇನಹಳ್ಳಿ ಗ್ರಾಮಕ್ಕೆ ತೆರಳುವ ತಿರುವಿನಂತದ್ದೇ ಇದ್ದು. ಕಾರಣ ಎಲ್ಲಿಯದೆೋ ಸನ್ನಿವೇಶದ ವೀಡಿಯೋ ತುಣಕನ್ನು ಬಳಸಿಕೊಂಡು, ರಸ್ತೆ ಬದಿಯ ಸ್ಥಳದಂತಿದ್ದು. ಕಾರಣ ಈ ಸಿಂಹ ಅಲ್ಲಿಯೇ ಕಾಣಿಸಿಕೊಂಡಿದೆ ಎಂದು ಯಾರೋ ಕಿಡಿಗೇಡಿಗಳು, ಬರೆದು ವಾಟ್ಸಾಪ್ ಗಳಲ್ಲಿ ಹಾಕಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಯನ್ನು, ಇತ್ತೀಚೆಗಷ್ಟೇ ಮೊಬೈಲ್ ಗಳ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಸಂಬಂಧಿಸಿದಂತೆ ಅರಣ್ಯ ಇಲಾಖಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ, ಇದು ಶುದ್ಧ ಸುಳ್ಳು ಸುದ್ದಿ ಕಾರಣ ಯಾರೂ ಯಾವುದೇ ಕಾರಣಕ್ಕೂ ಇದನ್ನು ನಂಬ ಬೇಡಿ ಎಂದಿದ್ದಾರೆ. ಇಂತಹ ಸುದ್ದಿಗಳು ಹರಡಿದಾಗ ವಿನಾಕಾರಣ ಆತಂಕ ಪಡಬೇಕಿಲ್ಲ, ಸಂಬಂಧಿಸಿದ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಅಥವಾ ಇಲಾಖೆಯ ಸಿಬ್ಬಂದಿ ಸಂಪರ್ಕಿಸಿ ಖಾತ್ರಿ ಪಡಿಸಿಕೊಳ್ಳಬೇಕಿದೆ ಎಂದಿದ್ದಾರೆ. ಯಾರೇ ಆಗಲಿ ಸಾಮಾಜಿಕ ಜಾಲತಣಗಳನ್ನು ಉತ್ತಮ ಕಾರ್ಯಕ್ಕೆ ಒಳ್ಳೇ ದೇಯೋದ್ದೇಶಕ್ಕೆ ಬಳಸಿಕೊಳ್ಳಬೇಕಿದೆ, ದುರುಪಯೋಗ ಪಡಿಸಿಕೊಳ್ಳಬಾರದು. ಹಾಗೂ ಬೇಕಾ ಬಿಟ್ಟಿ ವಿಷಯಗಳನ್ನು ಹರಿಬಿಡಬಾರದು, ವಿನಾಕಾರಣ ಸುಳ್ಳು ಸುದ್ದಿಗಳನ್ನು ಹಾಕಬಾರದು. ಸಾಮಾಜಿಕ ಜಾಲತಾಣಗಳ ದುರುಪಯೋಗ ಕಾನೂನು ರೀತ್ಯ ಅಪರಾಧ ಎಂಬುದನ್ನು, ಎಲ್ಲರೂ ಮನಗಾಣ ಬೇಕಿದೆ ಮತ್ತು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಸಮಾಜಿಕ ಜಾಲತಣಗಳನ್ನು ಸರ್ವರೂ ತುಂಬಾ ಜವಾ ಬ್ದಾರಿಯುತವಾಗಿ ಬಳಸಬೇಕಿದೆ, ಮತ್ತು ಇದರಲ್ಲಿನ ವಿಷಯಗಳನ್ನು ಪರಾಮಾರ್ಶಿಸಬೇಕಿದೆ….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
