ಚಳ್ಳಕೆರೆ ನಗರದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾವಣಗೆರೆ ವಿಭಾಗದ ಸ್ಲಂ ಬೋರ್ಡ್ ಇಂಜಿನೀಯರ್…!!!

ಚಳ್ಳಕೆರೆ ನಗರದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ತ್ಯಾಗರಾಜ ನಗರದ ಮನೆಯಲ್ಲಿ ನಡೆದಿದೆ. ದಾವಣಗೆರೆ ವಿಭಾಗದ ಸ್ಲಂ ಬೋರ್ಡ್ ಇಂಜಿನೀಯರ್ ಆಗಿದ್ದ ವೀರೇಶ್ ಬಾಬು(55) ಮೃತ ರ್ದುದೈವಿ. ಇನ್ನು ವೀರೇಶ್ ಬಾಬು ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ವೀರೇಶ್ ಬಾಬು ಅವರಿಗೆ ಹಕ್ಕು ಪತ್ರ ವಿತರಣೆ ಬಗ್ಗೆ ಆಕ್ಷೇಪ ಹಾಗೂ ಒತ್ತಡಗಳಿದ್ದವು ಎಂದು ಕುಟುಂಬಸ್ಥರು ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend