ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಹಾಗೂ ಉಪಾಧ್ಯಕ್ಷರಿಂದ ಕಾರ್ಮಿಕ ಸಚಿವರಿಗೆ ಹಾಗೂ ಶಾಸಕರಿಗೆ ಸನ್ಮಾನ..
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾದ ಶ್ರೀಮತಿ ಸಾಕಮ್ಮ ಬೋರಣ್ಣ ಅವರು ಕರ್ನಾಟಕ ಸರ್ಕಾರದ ಕಾರ್ಮಿಕರ ಸಚಿವರಾದ ಶ್ರೀ ಸಂತೋಷ್ ಎಸ್ ಲಾಡ್, ಮತ್ತು ಕೂಡ್ಲಿಗಿ ಜನಪ್ರಿಯ ಶಾಸಕರಾದ ಡಾಕ್ಟರ್ ಶ್ರೀನಿವಾಸ್ ಎನ್ ಟಿ, ರವರಿಗೆ ಹೊಸಹಳ್ಳಿಯ ಆನಂದ್ ವಿಹಾರ್ ನಲ್ಲಿ ಸನ್ಮಾನ ಮಾಡಿದರು.
ನಂತರ ಕಾರ್ಮಿಕರ ಸಚಿವರಾದ ಶ್ರೀ ಎಸ್ ಸಂತೋಷ್ ಲಾಡ್, ರವರು ಮಾತನಾಡಿ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ, ಉನ್ನತವಾದ ಅಭಿವೃದ್ಧಿಯನ್ನು ಕೈಗೊಳ್ಳಬೇಕು, ಮತ್ತು ಸಾಮಾನ್ಯ ಜನರಿಗೆ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡಿ ಹಾಗೂ ಇನ್ನು ಹೆಚ್ಚಿನ ಮಟ್ಟಕ್ಕೆ ಅಭಿವೃದ್ಧಿಗಾಗಿ ನಮ್ಮ ಸ್ನೇಹಿತರಾದ ಹಾಗೂ ಶಾಸಕರಾದ ಡಾಕ್ಟರ್ ಶ್ರೀನಿವಾಸ್ ರವರು ಮತ್ತು ಕಾರ್ಮಿಕ ಸಚಿವರು ನಿಮ್ಮ ಜೊತೆ ಅಭಿವೃದ್ಧಿ ನಿರ್ಮಿಸಲು ನಿಮ್ಮೊಂದಿಗೆ ಇರುತ್ತೇವೆ ಎಂದು ಮಾತನಾಡಿದರು.
ಕೂಡ್ಲಿಗಿ ಜನಪ್ರಿಯ ಶಾಸಕರಾದ ಡಾಕ್ಟರ್ ಶ್ರೀನಿವಾಸ್ ರವರು, ನಮ್ಮ ಕಾರ್ಮಿಕರ ಸಚಿವರಾದ ಶ್ರೀ ಸಂತೋಷ ಎಸ್ ಲಾಡ್ ರವರು ತಿಳಿಸಿದ ಹಾಗೆ, ನಿಮ್ಮ ಗ್ರಾಮ ಪಂಚಾಯಿತಿಯನ್ನು, ಇನ್ನಷ್ಟು ಮೇಲ್ಮಟ್ಟಕ್ಕೆ ಅಭಿವೃದ್ಧಿಗೊಳಿಸಬೇಕು ನಿಮ್ಮೊಂದಿಗೆ ನಾನು ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಆಗುವುದಿಲ್ಲ ಪಂಚಾಯತಿ ಆಕಾಂಕ್ಷಿಯಾಗಿ, ಶ್ರೀಮತಿ ನೇತ್ರಮ್ಮ ಓಬಣ್ಣ. ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಆರ್ ಗಂಗಮ್ಮ ರುದ್ರೇಶ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ, ಶ್ರೀಮತಿ ಚನ್ನಬಸಮ್ಮ ಬಸಣ್ಣ ಶ್ರೀಮತಿ ದುರ್ಗಮ್ಮ ದುರ್ಗಪ್ಪ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ನಾಗರಾಜ್, ಹಾಗೂ ಗ್ರಾಮ ಪಂಚಾಯತಿಯ ಎಲ್ಲ ಸರ್ವ ಸದಸ್ಯರು ಹಾಗೂ ಮುಖಂಡರುಗಳು ಕಾರ್ಮಿಕ ಸಚಿವರಿಗೆ ಹಾಗೂ ಜನಪ್ರಿಯ ಶಾಸಕರಿಗೆ ಸನ್ಮಾನಿಸಿದ…

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
