ಜೆ.ಡಿ.ಎಸ್ ಮುಡಿಗೇರಿದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು
ಗ್ರಾಮ ಪಂಚಾಯಿತಿಯ 2ನೇ ಅವದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಹಗರಿಬೊಮ್ಮನಹಳ್ಳಿಯ ಚುನಾವಣಾಧಿಕಾರಿಯಾದ E O ಪರಮೇಶ್ವರಪ್ಪ ಇವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಒಟ್ಟು 16ಜನ ಸದಸ್ಯರುಗಳಲ್ಲಿ 09 ಜನ ಸದಸ್ಯರುಗಳು ಹಾಜರಾಗಿದ್ದಾರೆ , ಅಧ್ಯಕ್ಷರಾಗಿ ಕಡಲಬಾಳು ಗ್ರಾಮದ ಜೆ.ಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ M M ಅನ್ನಪೂರ್ಣಮ್ಮ, ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಶಾಂತಮ್ಮ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಅಲ್ಲದೆ ತಾಲೂಕಿನ ತಂಬ್ರಳ್ಳಿ ಗ್ರಾಮದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ನಡೆದಿದ್ದು, ಅಧ್ಯಕ್ಷರಾಗಿ ಜೆ.ಡಿ ಎಸ್ ಬೆಂಬಲಿತ ಅಭ್ಯರ್ಥಿ ಏಣಿಗಿ ಪೂರ್ಣಿಮಾ ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಜೆ.ಡಿ ಎಸ್ ಬೆಂಬಲಿತ ಅಭ್ಯರ್ಥಿ ಮೇಗಳ ಮನೆ ರುದ್ರಮ್ಮ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ
ಚುನಾವಣೆ ಅಧಿಕಾರಿ ಸಿ.ಡಿ.ಪಿ.ಓ ವಂಕಿ ಸುದೀಪ್ ರಾವ ನೇತೃತ್ವದಲ್ಲಿ ಚುನಾವಣಾ ನಡೆಸಲಾಯಿತು ಈ ಸಂದರ್ಭದಲ್ಲಿ ತಂಬ್ರಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಸುವರ್ಥ ಹಾಗು ಸಿಬ್ಬಂಧಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಹಾಗು ಎಲ್ಲಾ ಸಿಬ್ಬಂಧಿಗಳು ಸದಸ್ಯರುಗಳಾದ ಮಂಜುನಾಥ್ ಎಂ.ಎನ್, ಮೆಹಬೂಬ್ ಭಾಷ ಸಂಡೂರು, ಬಣಕಾರ್ ಬಸಮ್ಮ, ಪ್ರತಿಭಾ ಗಿರೀಶ್, ಮುಖಂಡರುಗಳಾದ ಬಣಕಾರ್ ಕೊಟ್ರೇಶ್, ಸೊಬಟಿ ಹರೀಶ್, ಕಡ್ಡಿ ಕೊಟ್ರೇಶ್, ಬಣಕಾರ್ ಅರುಣಾ, ಸುಣಗಾರ್ ರಾಮು, ಗೌಡಜ್ಜನವರ ಬಸವರಾಜ, ಹನುಮೇಶ, ಬಸವರಾಜ ಇತರರು ಉಪಸ್ಥಿತರಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
