ಮರಬ ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ !!!!!!! ಕೂಡ್ಲಿಗಿ: ತಾಲೂಕಿನ ಮರಬ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಶ್ರೀ ವಿ ದುರುಗಮ್ಮ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಸಿಪಿಐಎಂ ಪಕ್ಷದ ಮರಬನಹಳ್ಳಿ ಕರಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೂಡ್ಲಿಗಿ ಪರಿಶಿಷ್ಟ ಪಂಗಡದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮೆಹಬೂಬ್ ಬಾಷಾ ಘೋಷಿಸಿದರು . ಮರಬ ಗ್ರಾಮ ಪಂಚಾಯತಿಯಲ್ಲಿ ಒಟ್ಟು 13 ಸದಸ್ಯರ ಬಲಾಬಲ ಹೊಂದಿರುವ ಮರಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಅನುಸೂಚಿತ ಜಾತಿ ಮಹಿಳಾ ಮೀಸಲಾತಿಯಲ್ಲಿ ಶ್ರೀಮತಿ ಶ್ರೀ ವಿ ದುರುಗಮ್ಮ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಮರಬನಹಳ್ಳಿ ಕರಿಯಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರ ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದರು . ಈ ಸಂದರ್ಭದಲ್ಲಿ ಒಟ್ಟು 13 ಸದಸ್ಯರು ಹಾಜರಿದ್ದರು ಮಹಬಾಷ , ಮಠದ ಗುರುರಾಜ , ಲಕ್ಷ್ಮೀ ಮಲ್ಲಾಪುರದ , ಜಿ. ಗೌರಮ್ಮ , ಪದ್ಮಾವತಿ ಕೆ , ತಳವಾರ ಹನುಮಂತಪ್ಪ , ರತ್ನಮ್ಮ , ಕವಳಪ್ಪ , ಬಸಣ್ಣ ತಿಪ್ಪಮ್ಮ , ಬೇಬಿ ಜಾನ್ ಹಾಗೂ ಅಂಜಿನಪ್ಪ ಕೆ ಮತ್ತು ಮುಖಂಡರುಗಳಾದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಂ ಶಿವಣ್ಣ , ಎಚ್ ವೀರಣ್ಣ , ಆದಿಮನೆ ವೀರಣ್ಣ , ಎಂ.ಎಸ್ ಅಜಯ್ ಕುಮಾರ್ , ಕೊಟ್ರೇಶ್ , ತಿಪ್ಪೇಸ್ವಾಮಿ , ನಾಗರಾಜ ಸೇರಿದಂತೆ ಇತರರು ಇದ್ದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
