;

ವಿಜಯನಗರ ಜಿಲ್ಲೆಯ , ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಪಿ . ಹರಿಬಾಬು ಅವರು ಅನಿರೀಕ್ಷಿತ ಭೇಟಿ… !!!

ವಿಜಯನಗರ ಜಿಲ್ಲೆಯ , ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಪಿ . ಹರಿಬಾಬು ಅವರು ಅನಿರೀಕ್ಷಿತ ಭೇಟಿ !!!!!! ವಿಜಯನಗರ ಜಿಲ್ಲೆ : ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಣವಿಕಲ್ಲು ಗ್ರಾಮದಲ್ಲಿರುವ ಪೋಲೀಸ್ ತಪಾಸಣೆ ಕೇಂದ್ರಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಪಿ. ಹರಿಬಾಬು ಅವರು ಅನಿರೀಕ್ಷಿತ ಭೇಟಿ ನೀಡಿದರು . ಇಲ್ಲಿನ ಪೋಲಿಸ್ ತಪಾಸಣೆ ಕೇಂದ್ರದ ಬಗ್ಗೆ ಮಾಹಿತಿಯನ್ನು ಕಲೆಹಾಕಿ , ನಂತರ ಕಾನಹೊಸಹಳ್ಳಿ ಪೋಲಿಸ್ ಠಾಣೆಯ ಪಿಎಸ್ಐ ಶ್ರೀ ಯರಿಯಪ್ಪ ಅವರೊಂದಿಗೆ ಎಸ್ ಪಿ ಸಾಹೇಬರು ಮಾತನಾಡಿ ಈ ಜಾಗದ ಬಗ್ಗೆ ಮಾಹಿತಿಯನ್ನು ಕೇಳಿದಾಗ ಇಲ್ಲಿರುವ ಪೋಲಿಸ್ ತಪಾಸಣೆ ಕೇಂದ್ರದ ಜಾಗವು ನಮ್ಮ ಪೋಲಿಸ್ ಇಲಾಖೆಯ ಠಾಣೆಯ ಹೆಸರಿನಲ್ಲಿ ಇದೆ ಎಂದು ತಿಳಿಸಿದರು . ನಂತರ ಸ್ಥಳೀಯರು ಎಸ್ ಪಿ ಸಾಹೇಬರ ಜೊತೆ ಮಾತನಾಡಿ ನಮ್ಮ ಗ್ರಾಮದಲ್ಲಿರುವ ಪೋಲೀಸ್ ತಪಾಸಣೆ ಕೇಂದ್ರವು ಸರಿಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು , ಆದರೆ ಇಲ್ಲಿಯವರೆಗೂ ಇಲ್ಲಿನ ಪೊಲೀಸ್ ತಪಾಸಣೆ ಕೇಂದ್ರಕ್ಕೆ ಪೋಲೀಸರನ್ನು ನೇಮಕ ಮಾಡಿಲ್ಲ ಎಂದು ತಿಳಿಸಿದರು . ತಕ್ಷಣವೇ ಸ್ಪಂದಿಸಿದ ಮಾನ್ಯ ಎಸ್ ಪಿ (ವಿಜಯನಗರ ಜಿಲ್ಲೆ) ಇವರು ಕೂಡಲೇ ಇದರ ಬಗ್ಗೆ ಮೇಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು . ಈ ಸಂದರ್ಭದಲ್ಲಿ ಕೊಟ್ಟೂರು ಸಿಪಿಐ ಹಾಗೂ ಕಾನಹೊಸಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಇದ್ದರು …

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;