ಬಣವಿಕಲ್ಲು ಗ್ರಾಮ ಪಂಚಾಯಿತಿಗೆ ನಡೆದ ಎರಡನೇ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ !!!!!! ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿಗೆ ನಡೆದ ಎರಡನೇ ಅವಧಿಯ ಅಧ್ಯಕ್ಷ ಸ್ಥಾನವು (ಪರಿಶಿಷ್ಟ ಪಂಗಡದ) ಮಹಿಳೆ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು . 21, ಸದಸ್ಯರ ಬಲದಲ್ಲಿ . 14 , ಮತಗಳನ್ನು ಪಡೆದು ಚಿಕ್ಕೋಬನಹಳ್ಳಿ ಗ್ರಾಮದ ಸದಸ್ಯೆ ಶ್ರೀಮತಿ ಶ್ರೀ ಪಿ. ಓಬಮ್ಮ ಪಾಪಣ್ಣ ಅಧ್ಯಕ್ಷರಾಗಿ ಆಯ್ಕೆಯಾದರು . ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು , ಮೂವರು ನಾಮಪತ್ರ ಸಲ್ಲಿಸಿದ್ದರು , 13 , ಮತಗಳನ್ನು ಪಡೆದು ಬಣವಿಕಲ್ಲು ಗ್ರಾಮದ 1 ನೇ ವಾರ್ಡ್ ಸದಸ್ಯರಾದ ಆರ್. ವೀರಣ್ಣ ಜಯಶೀಲರಾಗಿ ಉಪಾಧ್ಯಕ್ಷರಾದರು .

ಚುನಾವಣಾ ಅಧಿಕಾರಿಯಾಗಿ ಶ್ರೀ ಬಿ ಆರ್ ಪ್ರಸನ್ನ ಕುಮಾರ್ (A.W) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೂಡ್ಲಿಗಿ , ಹಾಗೂ ಸಹಾಯಕರಾಗಿ ಶ್ರೀ ಜಿ ನಾಗರಾಜ ದ್ವಿತೀಯ ದರ್ಜೆ ಸಹಾಯಕರು , ಪಿಡಿಓ ಶ್ರೀಮತಿ ಎಚ್. ಶಾಂತಕುಮಾರಿ , ಕಾರ್ಯದರ್ಶಿ ತಿಪ್ಪೇಸ್ವಾಮಿ , ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು , ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಶ್ರೀ ಬಿ. ಎಸ್ ನಾಗರತ್ನಮ್ಮ ಶರಣಪ್ಪ ,ಕೆ.ಜಿ. ಕಲ್ಲೇಶ್ , ಗುಂಡುಮುಣುಗು ಓಬಣ್ಣ , ಶ್ರೀಮತಿ ಶ್ರೀ ಬಿ.ಎಸ್ ಪೂರ್ಣಿಮಾ ಪ್ರಶಾಂತ್ ಗೌಡ , ಶ್ರೀಮತಿ ಶ್ರೀ ಚಂದ್ರಮ್ಮ ಓದೋ ದುರ್ಗಪ್ಪ , ವೀರಭದ್ರಪ್ಪ ಕೆ , ಶ್ರೀಮತಿ ಶ್ರೀ ಸೈಪು ಭಾನು ಅಲ್ಲಾಭಕ್ಷಿ , ಶ್ರೀಮತಿ ಶ್ರೀ ಶೋಭಾ ಮಲ್ಲಿಕಾರ್ಜುನ , ಕೆ.ಟಿ. ಸಿದ್ದೇಶ್ , ಎಚ್. ಹನುಮಂತಪ್ಪ , ಶ್ರೀಮತಿ ಶ್ರೀ ಸಾಕಮ್ಮ ಎಚ್ ಹರೀಶ್ ನಾಯ್ಕ , ಶ್ರೀಮತಿ ಶ್ರೀ ಹಿರಿಯಮ್ಮ ಹೆಚ್ ನಾಗಪ್ಪ , ಮತ್ತು ಬಣವಿಕಲ್ಲು ಗ್ರಾಮದ ಮುಖಂಡರುಗಳು ಇನ್ನು ಅನೇಕರು ಇದ್ದರು . ಇಂದು ನಡೆದ ಚುನಾವಣೆಗೆ ಕೂಡ್ಲಿಗಿ ಡಿ ವೈ ಎಸ್ ಪಿ , ಕೊಟ್ಟೂರು ಸಿಪಿಐ , ಮತ್ತು ಕಾನಹೊಸಹಳ್ಳಿ ಪೋಲಿಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಸೇರಿ 20ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಿ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು …

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
