ಬಣವಿಕಲ್ಲು ಗ್ರಾಮ ಪಂಚಾಯಿತಿಗೆ ನಡೆದ ಎರಡನೇ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ !!!!!!! ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿಗೆ ನಡೆದ ಎರಡನೇ ಅವಧಿಯ ಅಧ್ಯಕ್ಷ ಸ್ಥಾನವು (ಪರಿಶಿಷ್ಟ ಪಂಗಡದ) ಮಹಿಳೆ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇಪ್ಪತ್ತೊಂದು ಸದಸ್ಯ ಬಲದಲ್ಲಿ , ಹದಿನಾಲ್ಕು ಮತಗಳನ್ನು ಪಡೆದು ಚಿಕ್ಕೋಬನಹಳ್ಳಿ ಗ್ರಾಮದ ಸದಸ್ಯೆ ಶ್ರೀಮತಿ ಶ್ರೀ ಪಿ. ಓಬಮ್ಮ ಪಾಪಣ್ಣ ಅಧ್ಯಕ್ಷರಾಗಿ ಆಯ್ಕೆಯಾದರು .

ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು ಮೂವರು ನಾಮಪತ್ರ ಸಲ್ಲಿಸಿದ್ದರು, ಹದಿಮೂರು ಮತಗಳನ್ನು ಪಡೆದು ಬಣವಿಕಲ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಆರ್. ವೀರಣ್ಣ ಜಯಶೀಲರಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಶ್ರೀ ಬಿ ಆರ್ ಪ್ರಸನ್ನ ಕುಮಾರ್ (A.W) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೂಡ್ಲಿಗಿ , ಹಾಗೂ ಸಹಾಯಕರಾಗಿ ಶ್ರೀ ಜಿ ನಾಗರಾಜ ದ್ವಿತೀಯ ದರ್ಜೆ ಸಹಾಯಕರು, ಪಿಡಿಓ ಶ್ರೀಮತಿ ಎಚ್. ಶಾಂತಕುಮಾರಿ , ಕಾರ್ಯದರ್ಶಿ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶ್ರೀ ಬಿ.ಎಸ್. ನಾಗರತ್ನಮ್ಮ ಶರಣಪ್ಪ .ಶ್ರೀಮತಿ ಶ್ರೀ ಬಿ.ಎಸ್. ಪೂರ್ಣಿಮಾ ಪ್ರಶಾಂತ್ ಗೌಡ, ಕೆ.ಜಿ. ಕಲ್ಲೇಶ್, ಗುಂಡುಮುಣುಗು ಓಬಣ್ಣ , ಶ್ರೀಮತಿ ಶ್ರೀಮತಿ ಶ್ರೀ ಚಂದ್ರಮ್ಮ ಓದೋ ದುರುಗಪ್ಪ , ಶ್ರೀಮತಿ ಶ್ರೀ ಶೋಭಾ ಮಲ್ಲಿಕಾರ್ಜುನ , ಶ್ರೀಮತಿ ಶ್ರೀ ಸಾಕಮ್ಮ ಬಿ ಹರೀಶ್ ನಾಯ್ಕ, ಶ್ರೀಮತಿ ಶ್ರೀ ಹಿರಿಯಮ್ಮ ಎಚ್ ನಾಗಪ್ಪ , ಶ್ರೀ ವೀರಭದ್ರಪ್ಪ, ಸಿದ್ದೇಶ್ ಕೆ. ಟಿ , ಹಾಗೂ ಬಣವಿಕಲ್ಲು ಗ್ರಾಮದ ಮುಖಂಡರುಗಳು ಇತರರು ಇದ್ದರು. ಇಂದು ನಡೆದ ಚುನಾವಣೆಗೆ ಕೂಡ್ಲಿಗಿ ಡಿವೈಎಸ್ಪಿ ಹಾಗೂ ಕೊಟ್ಟೂರು ಸಿಪಿಐ ಮತ್ತು ಕಾನಹೊಸಹಳ್ಳಿ ಪೋಲಿಸ್ ಠಾಣೆಯ ಪೊಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು…

ವರದಿ.ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
