ಕೂಡ್ಲಿಗಿ:- ದಿನಾಂಕ, 31-7-23 ಸೋಮವಾರದಂದು ನಡೆದ ತಾಲೂಕಿನ ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ನಡೆದ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂವತ್ತು ಗ್ರಾಮ ಪಂಚಾಯಿತಿ ಸದಸ್ಯರ ಬಲದ ಪಂಚಾಯ್ತಿಯಲ್ಲಿ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಎಸ್ಸಿ ಮಹಿಳೆಗೆ ಮೀಸಲಿದ್ದು, ಸಾಮಾನ್ಯ ವರ್ಗದಿಂದ A.C.ಚೇತನ್ ಕುಮಾರ್ K.G. ಸಿದ್ದನ ಗೌಡ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಈ ಇಬ್ಬರ ನಡುವೆ ತಲಾ 15 ಮತಗಳನ್ನು ಪಡೆದು ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಲಾಟರಿ ಎತ್ತುವ ಮೂಲಕ A.C. ಚೇತನ್ ಕುಮಾರ್ ಅವರು ಆಯ್ಕೆಯಾದರು ಎಸ್ಸಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಅವರು ಆಯ್ಕೆಯಾದರು. ಅಚ್ಚರಿಯ ಬೆಳವಣಿಗೆ ಎಂದರೆ ಕೆ.ಜಿ ಸಿದ್ದನ ಗೌಡ ಬಣದ ನೇತ್ರಾವತಿಯವರು 16 ಮತಗಳನ್ನು ಪಡೆದರು, ಚುನಾವಣಾ ಅಧಿಕಾರಿಯಾಗಿ ತಾಲೂಕ ಪಂಚಾಯಿತಿ ಇ ಓ ವೈ. ರವಿಕುಮಾರ್ , ಸಹಾಯಕ ಅಧಿಕಾರಿಗಳಾಗಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ವೈ ಎಸ್ ಅಶ್ವತ್ ಕುಮಾರ್, ವೆಂಕಟೇಶ್ ನಿರ್ವಹಿಸಿದರು ಪಿಡಿಒ ಬಸಮ್ಮ, ಸಿಬ್ಬಂದಿಗಳಾದ ಕೆ ಜಿ ನಾಗರಾಜ, ಅನಿಲ್ ಕುಮಾರ್, ಶಶಿಕುಮಾರ್ ಇದ್ದರು. ಅಧ್ಯಕ್ಷ ಸ್ಥಾನವು ತೀವ್ರ ಕುತೂಹಲ ಹಣಾಹಣಿ ಇದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಕೂಡ್ಲಿಗಿ ಡಿವೈಎಸ್ಪಿ, ಸಿಪಿಐ, ಮೂವರು ಪಿಎಸ್ಐ ಸೇರಿ 30ಕ್ಕೂ ಪೊಲೀಸರನ್ನು ಯೋಜನೆ ಮಾಡಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
