ಜೆಸ್ಕಂ ಕಂಪನಿ ಯ ವ್ಯವಸ್ಥಾಪಕ ನಿರ್ದೇಶಕರ ಸರ್ವಾಧಿಕಾರಿ ಧೋರಣೆ ಯ ಬಗ್ಗೆ ಮನವಿ.
ವಿಜಯನಗರ ಜಿಲ್ಲೆ ,ಹಗರಿಬೊಮ್ಮನಹಳ್ಳಿ.
ಪಟ್ಟಣದ ಜೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಗುತ್ತಿಗೆದಾರರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಹುಲ್ ಪಾಂಡೇ ಇವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗುತ್ತಿಗೆದಾರರಾದ , ಏನ್ ಎಂ ಗೌಸ್, ಕೇಂದ್ರ ಕಾರ್ಯಕಾರಿ ಣಿ ಸಮಿತಿ, ಹಾಗೂ, ಕ.ರವೇ.(ನಾರಾಯಣ ಗೌಡ ಬ ಣ) ಅಧ್ಯಕ್ಷ, ಮಾತನಾಡಿ, ಜೆಸ್ಕಾಂ ವಿಭಾಗ ದಲ್ಲಿ ಬರುವ ಉಪವಿಭಾಗಗಳಲ್ಲಿ ಯಾವುದೇ ತರಹದ ಇಲಾಖೆಗೆ ಸಂಬಂಧ ಪಟ್ಟ ಲೇಬರ್ ಆವಾರ್ಡಿನ ತುಂಡು ಗುತ್ತಿಗೆ ಕಾಮಗಾರಿಗಳನ್ನು ಡಿ.01-08-2023 ರಿಂದ ಅನಿಷ್ಟಾವಧಿಯವರೆಗೆ ಸ್ಥಗಿತ ಗೊಳಿಸುತ್ತೇವೆಂದು ತಿಳಿಸುತ್ತೇವೆ. ಆದ್ದರಿಂದ ತಮ್ಮ ಇಲಾಖೆಯಿಂದ ನಮ್ಮ ಗುತ್ತಿಗೆದಾರರಿಗೆ ಯಾವುದೇ ತರಹದ ಒತ್ತಡವನ್ನು ಈ ಸಂದರ್ಭದಲ್ಲಿ ತಮ್ಮಲ್ಲಿ ಬೇಡಿಕೊಂಡಿದ್ದೇನೆ. ಈ ಹಿಂದೆ ದಿನಾಂಕ 24-07.2023 ರಂದು ರಾಜ್ಯಾಧ್ಯಕ್ಷರನ್ನು ಒಳಗೊಂಡು ಏಳು ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ಸರ್ವ ಗುತ್ತಿಗೆದಾರರು ಒಳಗೊಂಡು ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಇವರಲ್ಲಿ 1 ಲಕ್ಷದಿಂದ 5 ಲಕ್ಷದವರೆಗಿನ ತುಂಡು ಗುತ್ತಿಗೆ ಕಾಮಗಾರಿಗಳನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ನೀಡಬೇಕು ಹಾಗೂ ಪರಿವರ್ತಕಗಳನ್ನು ತ್ವರಿತವಾಗಿ ನೀಡಬೇಕು ವಿದ್ಯುತ್ ಗುತ್ತಿಗೆದಾರರು ಪೂರೈಸುವ ಕಾಮಗಾರಿಗಳ ಬಿಲ್ಲುಗಳನ್ನು ಕೂಡಲೇ ವಿತರಿಸಬೇಕು ನಮ್ಮ ಬೇಡಿಕೆಗಳನ್ನು ಈಡೇರಿಸಲು ಹೋರಾಟವನ್ನು ಮಾಡಿ ಮನವಿಯನ್ನು ಕೊಟ್ಟಿರುತ್ತೇವೆ. ಆದರೆ ಈ ಮನವಿಗೆ ಸ್ಪಂದಿಸಿ ತಾವು ಇಲ್ಲದ ಇರುವ ಸಂದರ್ಭ ದಲ್ಲಿ ಹೋರಾಟಕ್ಕೆ ಬಂದ ಗುತ್ತಿಗೆದಾರರ ಜನಸ್ತೋಮವನ್ನು ಕಂಡು ತಮ್ಮ ಇಲಾಖೆಯ ಡಿಟಿ ರವರಿಗೆ ಮೌಖಿಕ ಆದೇಶವನ್ನು ಮಾಡಿ ಗುತ್ತೇದಾರರ ಪ್ರಸ್ತುತ ಬೇಡಿಕೆಗಳಿಗೆ ಸ್ಪಂದಿಸಿ ನಮ್ಮ ಪರವಾಗಿ ನೀವು ಲಿಖಿತ ಆದೇಶಗಳನ್ನು ನೀಡಿ ಎಂದು ಹೇಳಿದರಂದು ಡಿ.ಟಿ.ರವರು ಹೋರಾಟ ಮಾಡುತ್ತಿರುವ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಪತ್ರಗಳನ್ನು ತೆಗೆದುಕೊಂಡು ಈ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿಕೆ ನೀಡಿದ ನಂತರ ಲಿಖಿತ ರೂಪದಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ 24-07-2023 ರಂದು ಆದೇಶ ನೀಡಿರುತ್ತಾರೆ. ಆದರೆ ತದನಂತರ ಮರುದಿನವೇ ವ್ಯವಸ್ಥಾಪಕ ನಿರ್ದೇಶಕರು ಡಿ. ಟಿ. ಅವರು ಸಮ್ಮತಿ ಸೂಚಿಸಿ ಗುತ್ತಿಗೆದಾರರಿಗೆ ನೀಡಿರುವ ಆದೇಶಗಳನ್ನು 25-07-2023 ರಂದು ರದ್ದುಗೊಳಿಸಿ ಆದೇಶ ಹೊರಡಿಸಿರುತ್ತಾರೆ. ಆದ್ದರಿಂದ ಈ ಧೋರಣೆಯನ್ನು ಖಂಡಿಸಿ, ಇಂದು 01-08-2023 ರಂದುಅ ನಿರ್ದಿಷ್ಟಾವಧಿಯವರೆಗೆ ಹೋರಾಟ ಮಾಡಲು ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಹಾಗೂ ಹ.ಬೊ. ಹಳ್ಳಿ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಎಲ್ಲ ಕೆಲಸ ಕಾರ್ಯಗಳನ್ನು ತ ಸ್ಥಗಿತಗೊಳಿಸ ಲಾಗಿದೆ. ಗುತ್ತಿಗೆದಾರರ ಹಿತ ದೃಷ್ಟಿಯಿಂದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ಹಾಗೂ ಈ ಹಿಂದೆ ನಾವು ಬೇಡಿಕೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಆ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಶ್ರೀ ಶೇಖರ್ ಬಹುರೂಪಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು, ಬೆಸ್ಕಾಂ ವಿಭಾಗ ಹ. ಬೊ.ಹಳ್ಳಿ ಇವರಿಗೆ ಮನವಿ ಪತ್ರ ಕೊಡಲಾಯಿತು.. ಎಂದರು.
ಈ ವೇಳೆಯಲ್ಲಿ ಗೌರವ ಅಧ್ಯಕ್ಷರುಗಳಾದ, ಶ್ರೀ ರಾಘವೇಂದ್ರ ತಳವಾರ್, ಶ್ರೀ ಗುರು ಬಸವರಾಜ್ ಜಿಎಂ, ಗೌರವ ಕಾರ್ಯದರ್ಶಿ, ಸಿದ್ದಲಿಂಗ ಸ್ವಾಮಿ, ಗೌರವ ಸಹ ಕಾರ್ಯದರ್ಶಿ ಲೋಕೇಶ್, ಖಜಾಂಚಿ ಕೃಷ್ಣ ಪತ್ತಾರ, ಸಂಘಟನಾ ಕಾರ್ಯದರ್ಶಿ, ಮುರಳಿದರ ಎಂ, ಶಿವಕುಮಾರ್ ಎಂ, ಗುತ್ತಿಗೆದಾರರಾದ, ಶಂಕರ್, ವಿಜಯ್ ಕುಮಾರ್, ಗುರು ಬಸವರಾಜ್, ತಿಮ್ಮಣ್ಣ, ಮಂಜುನಾಥ ಬಿಎಂಎಸ್, ಕೊಟ್ರೇಶ ಎಂ. ರಮೇಶ್ ಡಿ, ವಾಗೀಶ್ ಸಿ, ವೀರೇಶ್, ರಾಘವೇಂದ್ರ ಟಿ, ಲೋಕೇಶ್, ಕೊಟ್ರೇಶ,ಪೋರ್ಯ ನಾಯಕ , ಮುರುಳಿ, ಕೃಷ್ಣ, ಸಿದ್ದೇಶ ಅಶೋಕ ದಾದಾಪೀರ್,..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
