ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಬ್ರಿಜ್ ಭೂಷಣ ಸಿಂಗ್…!!!

ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಬ್ರಿಜ್ ಭೂಷಣ ಸಿಂಗ್

ಬಿಜೆಪಿಯಲ್ಲಿ ಶಕ್ತಿಶಾಲಿ ನಾಯಕ ಯಾರು ?
ನಿಮ್ಮ ಉತ್ತರ ಮೋದಿ ಎಂದಾದರೆ ಅದು ತಪ್ಪು. ಬಿಜೆಪಿಯಲ್ಲಿ ಅತ್ಯಂತ ಶಕ್ತಿಶಾಲಿ ನಾಯಕ ಬ್ರಿಜ್ ಭೂಷಣ್ ಸಿಂಗ್.! ಅವನ ಮೇಲೆ 80ಕ್ಕೂ ಅಧಿಕ ಮೊಕದ್ದಮೆ ದಾಖಲು ಆಗಿದೆ.

ಮುಂಬೈ ಸರಣಿ ಬಾಂಬ್ ಸ್ಟೋಟದ ಆರೋಪಿ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂಗೆ ಸಹಾಯ ಮಾಡಿದ ಆರೋಪದಲ್ಲಿ ಅವನ ಮೇಲೆ ಟಾಡಾ ಕಾಯ್ದೆ ಅನ್ವಯ ಪ್ರಕರಣ ದಾಖಲು ಆಗಿತ್ತು. ಹಲವಾರು ವರ್ಷಗಳ ಕಾಲ ಜೈಲಿನಲ್ಲಿ ಇದ್ದ ಪ್ರಕರಣದ ಸಾಕ್ಷಿಗಳು ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸಿದ ಕಾರಣ ಬ್ರಿಜ್ ಭೂಷಣ್ ಸಿಂಗ್ ಖುಲಾಸೆಗೊಂಡ.

ಆರು ಬಾರಿ ಸಂಸದ ಟಿವಿ ಸಂದರ್ಶನದಲ್ಲಿ ಲೈವ್ ಆಗಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಇವನ ಮೇಲೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಎಫ್ಐಆರ್ ದಾಖಲು ಆಗಿದೆ. ಗಂಭೀರ ಪ್ರಕರಣ ಆಗಿರುವ ಪೋಕ್ಸೋ ಅಡಿಯಲ್ಲಿ ಎಫ್ಐಆರ್ ದಾಖಲು ಆಗಿದೆ ಪೋಕ್ಸೋ ಕಾಯ್ದೆಯ ಪ್ರಕಾರ ಎಫ್ಐಆರ್ ದಾಖಲು ಆದರೆ ಪೋಲಿಸರು ಆರೋಪಿಯನ್ನು ಕೂಡಲೇ ಬಂಧಿಸಬೇಕು.

ಆದರೆ ಸಂವಿಧಾನ, ಕಾನೂನು, ಕೋರ್ಟ್ ಆದೇಶ ಎಲ್ಲವನ್ನೂ ಧಿಕ್ಕರಿಸಿ ಬಿಜೆಪಿ ಈ ಕ್ಷಣದವರೆಗೂ ಬ್ರಿಜ್ ಭೂಷಣ್ ಸಿಂಗ್ ನನ್ನು ಬಂಧಿಸಿಲ್ಲ. ಮಾತ್ರವಲ್ಲ ಪಕ್ಷದ ಯಾವುದೇ ನಾಯಕರು ತುಟಿ ಪಿಟಿಕ್ ಅನ್ನುವುದಿಲ್ಲ. ನಿಜವಾಗಿಯೂ ಮೋದಿ ಅಮಿತ್ ಶಾ ಶಕ್ತಿಶಾಲಿ ನಾಯಕರು ಆಗಿದ್ದರೆ ಬ್ರಿಜ್ ಭೂಷಣ್ ಸಿಂಗ್ ನನ್ನು ಉಚ್ಛಾಟಿಸಿ ಪಕ್ಷಕ್ಕೆ ಆಗುತ್ತಿರುವ ಮುಜುಗರ ತಪ್ಪಿಸುತ್ತಿದ್ದರು.

ಆದರೆ ಬ್ರಿಜ್ ಭೂಷಣ್ ಸಿಂಗ್ ನಂತಹ ಗೂಂಡಾನನ್ನು ಎದುರು ಹಾಕಿಕೊಳ್ಳುವ ಧೈರ್ಯ ಬಿಜೆಪಿಯ ಯಾವ ನಾಯಕರಿಗೂ ಇಲ್ಲಾ….

 

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend