ಪಕ್ಷೇತ್ರವಾಗಿ ಸ್ಪರ್ಧಿಸಲು ಟಿಕೆಟ್ ವಂಚಿತ ಆಕಾಂಕ್ಷಿಗಳು ನಿರ್ಧಾರ.

ರಬಕವಿ:ಸ್ಥಳೀಯ ನಾಡಗೌಡ ಆಸ್ಪತ್ರೆಯಲ್ಲಿ ಸೇರಿದ್ದ ಕಾಂಗ್ರೆಸ್ ಟಿಕೆಟ್ ವಂಚಿತ ಆಕಾಂಕ್ಷಿಗಳಾದ ಡಾ. ಎ.ಆರ್.ಬೆಳಗಲಿ ಮತ್ತು ಪದ್ಮಜೀತ ನಾಡಗೌಡ ಅಭಿಮಾನಿಗಳು ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಭೆ ಮಾಡಿ ನಿರ್ಧಾರ ಕೈಗೊಂಡರು. ಸತತ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದು ಸೇವೆ ಸಲ್ಲಿಸಿದ್ದರು ಸಹ ಡಾ. ಬೆಳಗಲಿಯವರಿಗೆ ಕೈ ಟಿಕೆಟ್ ತಪ್ಪಿದ್ದು ಬೆಂಬಲಿಗರಿಗೆ ಅತೀವ ನೋವಾಗಿದೆ ಎಂದು ಮಾತನಾಡುವ ಮಧ್ಯೆ ಭಾವುಕರಾಗಿ ತಮ್ಮ ನುಡಿಗಳನ್ನು ಆಡಿದರು. ಡಾ. ನಾಡಗೌಡ ಅವರಿಗೆ ಜಾತಿ ಪ್ರಾಬಲ್ಯಾ ಇಲ್ಲ ಎಂದು ಕೊನೆಯ ಕ್ಷಣದಲ್ಲಿ ಕೈ ಬಿಟ್ಟಿರುವುದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗಿದೆ. ನೇಕಾರರ ರಾಷ್ಟ್ರೀಯ ಉಪಾಧ್ಯಕ್ಷರಾದ ಶಂಕರ ಸೊರಗಾಂವಿ ಮಾತನಾಡಿ ಪ್ರತಿಬಾರಿಯು ಪಕ್ಷ ಸ್ಥಳೀಯರಿಗೆ ಟಿಕೆಟ್ ನೀಡದೆ ಹೊರಗಿನವರಿಗೆ ಟಿಕೆಟ್ ನೀಡಿದ್ದು ಈ ಬಾರಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಹೆಚ್ಚಿದರಿಂದ ಸ್ಥಳೀಯರಿಗೆ ಸಿಕ್ಕಿತ್ತಾದರು ಆದರೆ ನವು ಅಪೇಕ್ಷಿಸಿದ ಅಭ್ಯರ್ಥಿಗೆ ಸಿಗದಿರುವುದು ನೋವಿನ ಸಂಗತಿ ಈ ಬಾರಿ ಸ್ಥಳೀಯ ಆಕಾಂಕ್ಷಿಗಳಾದ ಡಾ. ಎ.ಆರ್.ಬೆಳಗಲಿ ಮತ್ತು ಡಾ.ಪದ್ಮಜೀತ ನಾಡಗೌಡ ಇವರ ಇರ್ವರಲ್ಲಿ ಪಕ್ಷೇತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಆರಿಸಿ ತರುವುದು ನಮ್ಮ ನಡೆ ಎಂದರು. ಈಗಾಗಲೇ ಭಾಜಪದಲ್ಲಿ ಸ್ಥಳೀಯ ಆಕಾಂಕ್ಷಿಳಿಗೆ ಟಿಕೆಟ್ ಕೈ ತಪ್ಪಿದ್ದು ಅಸಮಾಧಾನಗೊಂಡ ನೇಕಾರ ನಾಯಕರು ಕಾಂಗ್ರೆಸನ ವಂಚಿತ ಅಭ್ಯರ್ಥಿಗಳು ಸೇರಿ ನಾಮಪತ್ರ ಸಲ್ಲಿಸಿ ಹಿಂಪಡೆಯುವ ಅವಧಿಯೊಳಗೆ ಚರ್ಚಿಸಿ ಸೂಕ್ತ ಆಯ್ದ ಅಭ್ಯರ್ಥಿಯನ್ನು ಪಕ್ಷೇತ್ರವಾಗಿ ಕಣಕ್ಕಿಳಿಸಿ ಆರಿಸಿ ತರಲು ನಿರ್ಧರಿಸಿದರು.

ವರದಿ.
ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
