ಆಮ್ ಆದ್ಮಿ ಪಾರ್ಟಿಯ ಪತ್ರಿಕಾಗೋಷ್ಠಿ.
ಹ.ಬೊ.ಹಳ್ಳಿ. ಈ ನಮ್ಮ ಪಕ್ಷ ಈ ಕ್ಷೇತ್ರದಲ್ಲಿ ಬೀಜ ಬಿತ್ತಿ ಅದನ್ನು ನೀರು ಹಾಕಿ ಪೋಕ್ಷಿಸಿ ಮುಂದೆ ಹೋದಂತ ಪಕ್ಷ ಅದು ಮುಂದೆ ಹೆಮ್ಮರವಾಗಿ ಬೆಳೆದು ಎಲ್ಲರೂ ಆಸರೆಯಾಗಿ ನಿಲ್ಲುವಂತಹ ಈ ನಮ್ಮ ಪಕ್ಷ ಎಂದು ಎ.ಎ.ಪಿ. ರಾಜ್ಯ ಕಾರ್ಯದರ್ಶಿ .ಡಾ. ತಿಪ್ಪೇಸ್ವಾಮಿ ವೆಂಕಟೇಶ್, ಹೇಳಿಕೆ.ಪಟ್ಟಣದ ಹಳೆ ಹ.ಬೊ. ಹಳ್ಳಿ. ಎ.ಎ.ಪಿ. ಕಚೇರಿ ಯಲ್ಲಿ, ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ನಾನು ಈಗಾಗಲೇ ಒಂದು ವಾರದ ಕೆಳಗೆ ನಾನು ಈ ಪಕ್ಷಕ್ಕೆ ಸೇರ್ಪಡೆ ಯಾಗಿದ್ದೇನೆ. ಇದಕ್ಕೆ ಕಾರಣ ನಾನು ಈ ಹಿಂದೆ ಸುಮಾರು ವರ್ಷಗಳಿಂದ ಒಬ್ಬ ಜೆಡಿಎಸ್ ಕಾರ್ಯಕರ್ತನಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ವಿಧಾನಸಭಾ ಅಭ್ಯರ್ಥಿ ಆಕಾಂಕ್ಷಿಯಾಗಿ, ಪಕ್ಷವನ್ನು ಈ ಕ್ಷೇತ್ರದಲ್ಲಿ ನಾನು ಪಕ್ಷ ಸಂಘಟನೆ ಯನ್ನು ಮಾಡಿ ಬೆಳೆಸಿದಂತವನು. ಯಾರು ಎಲ್ಲಿಂದ ಬಂದು ತಮ್ಮ ಜೀವನ ಸಾಗಿಸುವ ಗೋಸ್ಕರ ತಮ್ಮ ಮಗನ ಜೀವನಕ್ಕಾಗಿ ಇಲ್ಲಿ ಈ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯನ್ನು ತಂದು ಭರ್ಜರಿಯಾಗಿ ರೋಡ್ ಶೋ ಮಾಡಿ, ಹೈ ಪ್ರಚಾರ ಗಿಟ್ಟಿಸಿಕೊಂಡು. ಈ ಕ್ಷೇತ್ರದ ಅಭ್ಯರ್ಥಿಯಂತೆ ಹೇಳಿ ಘೋಷಣೆ ಮಾಡಿದರು. ಇದನ್ನೆಲ್ಲ ನೋಡಿ ನಮ್ಮ ಪಕ್ಷದ ಹಿರಿಯ ವರಿಷ್ಠ ರಿಗೆದೂರು ಸಲ್ಲಿಸಿದ್ದೆ .ವರದಿ ಕೂಡ ಮಾಡಿದ್ದೆ ಆದರೆ ಅವರು ಯಾವ ರೀತಿಯಿಂದಲೂ ಕ್ರಮ ಕೈಗೊಳ್ಳಲಿಲ್ಲ. ನನ್ನ ಮನಸ್ಸಿಗೆ ನೋವು ಉಂಟಾಯಿತು . ತಕ್ಷಣವೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ನನ್ನಂತ ನಿಷ್ಠಾವಂತ ಕಾರ್ಯಕರ್ತನಿಗೆ ಬೆಲೆ ಇಲ್ಲದಂತಾಗಿದೆ. ಅದಕ್ಕಾಗಿ ನಾನು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದೇನೆ. ಈ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಗಳು ಆದ ಅರವಿಂದ್ ಕೇಜ್ರಿವಾಲ್ ರವರು ನಮ್ಮನ್ನು ರಾಜ್ಯದ ಕಾರ್ಯದರ್ಶಿಯಾಗಿ ಮಾಡಿದರು . ಹಾಗೂ ಸ್ಟಾರ್ ಪ್ರಚಾರ ಕ ರನ್ನಾಗಿ, ಮಾಡಿದ್ದಾರೆ, ಈ ಪಕ್ಕದ ಸಂಘಟನೆಗಾಗಿ, ಹಾಗೂ ಈ ಪಕ್ಷದ ಬೀಜವನ್ನ ಬಿತ್ತಿ , ಅದಕ್ಕೆ ನೀರಾಕಿ ಪೋಷಣೆ ಮಾಡಿ, ಮುಂದೆ ಒಳ್ಳೆ ಫಸಲು ಬೆಳೆಯುವುದಕ್ಕೆ ಪರಿಶ್ರಣಿಸುತ್ತೇನೆ ಮುಂದಿನ ದಿನಗಳಲ್ಲಿ, ಈ ಕ್ಷೇತ್ರದಲ್ಲಿ ಸ್ವಚ್ಛ ದಕ್ಷ, ಆಡಳಿತ ತರುತ್ತೇವೆ. ಈ ಹ.ಬೊ. ಹಳ್ಳಿ ಕ್ಷೇತ್ರಕ್ಕೆ ವಿಧಾನಸಭಾ ಅಭ್ಯರ್ಥಿಯಾಗಿ, ಡಾಕ್ಟರ್ ಹನುಮಂತಪ್ಪ, ಇವರನ್ನು ನಮ್ಮ ಎ.ಎ.ಪಿ. ಅಭ್ಯರ್ಥಿಯನ್ನಾಗಿ ಘೋಷಣೆ ಬುಧವಾರದಂದು. ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿ ತ್ತೇವೆ. ಎಂದು ತಿಳಿಸಿದರು. ನಂತರ ಎಎಪಿ. ಅಭ್ಯರ್ಥಿಯಾದ, ಡಾಕ್ಟರ್ ಹನುಮಂತಪ್ಪ. ಮಾತನಾಡಿ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಲಂಚ ಮುಕ್ತಸೇವೆಗೆ ಆದ್ಯತೆ, ಒಂದು ಪಕ್ಷ ಕ್ಷೇತ್ರದ ಮತದಾರ , ಕಾನೂನು ಬದ್ಧ ಸರ್ಕಾರಿ ಸೇವೆ ಪಡೆಯಲು ಲಂಚ ನೀಡಿದ ಪ್ರಕರಣ, ಪ್ರಸಂಗ ನನ್ನ ಗಮನಕ್ಕೆ ಸಂದರ್ಭ ಅನುಸಾರ ದಾಖಲಾತಿಯೊಂದಿಗೆ ಲಿಖಿತ ರೂಪದ ಮನವಿ ಸಲ್ಲಿಸಿದಲ್ಲಿ ಲಂಚ ನೀಡಿದ ಹಣ, (ಲಂಚ ಪಡೆದಿರುವ ಯಾರೇ ಅಧಿಕಾರಿಯಾಗಿದ್ದರು ಲಂಚ ಜವಾಬ್ದಾರಿ ಹೊತ್ತು) ಮನವಿ ಸ್ವೀಕರಿಸಿದ, 3-7 ದಿನಗಳಲ್ಲಿ ವಾಪಸ್ಸು ನೀಡುತ್ತೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಸರ್ಕಾರಿ ಕಾಮಗಾರಿ ಕಳಪೆ ಎಂದು ಕಂಡುಬಂದಲ್ಲಿ ಸಂಬಂಧಿಕರನ್ನು ಹೊಣೆಯಾಗಿಸಿ, ಸರ್ಕಾರಕ್ಕಾದ ನಷ್ಟ ತುಂಬಿಕೊಡಲು, ಸರಿಪಡಿಸಲು ಕಾನೂನು ಬದ್ಧ ಕ್ರಮಕ್ಕೆ ಹೋರಾಡುತ್ತೇನೆ ಎಂದುಪ್ರಮಾಣ ಮಾಡುತ್ತೇನೆ. ಇನ್ನೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ವೇಳೆಯಲ್ಲಿ ಪಕ್ಷದ ಕಚೇರಿಯಲ್ಲಿ ಡಾಕ್ಟರ್ ತಿಪ್ಪೇಸ್ವಾಮಿ ವೆಂಕಟೇಶ್, ರಾಜ್ಯ ಕಾರ್ಯದರ್ಶಿ ಇವರ ನೇತೃತ್ವದಲ್ಲಿ ವಿವಿಧ ಪಕ್ಷದ ಅನೇಕ ಕಾರ್ಯಕರ್ತರು ಇಂದು ನಮ್ಮ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಶ್ರೀ ರಾಮನ ಗೌಡ್ರು, ರಾಜಣ್ಣ, ಜಮದಾಗ್ನಿ, ರೋಷನ್, ದಾದಾಪೀರ್, ಕುಮಾರ್ ನಾಯಕ್ ಕೆ, ಕೊಟ್ರೇಶ್ ಕೊಪ್ಪಳ, ಕೊಟ್ರೇಶ, ಅಜ್ಜಪ್ಪ, ಬಸವರಾಜ್, ಹಲ್ಲು ಕುದುರೆ, ಮಹಾಬಲೇಶ್ವರಪ್ಪ, ಬಿಜಿ ಬಸವನಗೌಡ, ಮಂಜುನಾಥ ,ಸ್ವಾಮಿ, ಸೋಮಪ್ಪ, ದುರ್ಗೇಶ, ವಲಿಸಾಬ್, ಯಮನೂರು ಸಾಬ್, ವಿಶ್ವನಾಥ್ ಸಿಎಂ, ನೂರ್ ಸಾಬ,ಮಾಬು ಭಾಷಾ, ರಾಜ ಸಾಬ್, ಫಕ್ರುದ್ದೀನ್, ಇನ್ನು ಅನೇಕ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
