ಡಾ ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಶುಕ್ರವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತೋತ್ಸವದ ನಿಮಿತ್ತ ಭಾವಚಿತ್ರಕ್ಕೆ ಪುಷ್ಪ ಮಾಲೆ ಸಲ್ಲಿಸಿ
ನಂತರ ಕಂದಾಯ ನಿರೀಕ್ಷಕರಾದ ಆಲೂರು ತಿಪ್ಪೇಸ್ವಾಮಿ ಮಾತನಾಡಿ
ದೇಶದಲ್ಲಿರುವ ಎಲ್ಲ ವರ್ಗದ ಬಡವರು ದಲಿತರು ಮತ್ತು ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಅವರು ಹಕ್ಕುಗಳಿಗೆ ಧ್ವನಿಯಾಗಿದ್ದ ವಿಶ್ವ ಕಂಡ ಮಹಾನ್ ನಾಯಕ ಹಾಗೂ ದೇಶದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂದರು
ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀನಿವಾಸ ಕೊಂಡಿ. ಚನ್ನಬಸಯ್ಯ. ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರ ಸ್ವಾಮಿ. ಮತ್ತು ನಾಗೇಶ್ . ಹನುಮಂತಪ್ಪ ಕುಂಬಾರ್. ಸ್ವಾಮಿ. ಸೇರಿದಂತೆ ಯುವಕರು ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
