ಸರ್ಕಾರ ಪೊಲೀಸರ ಬಗ್ಗೆ ಕಾಳಜಿ ವಹಿಸಿ ನಿರುದ್ಯೋಗಿಗಳಿಗೆ ಕರ್ತವ್ಯಕ್ಕೆ ನೇಮಿಸಿಕೊಳ್ಳಲಿ -ವಕೀಲ ಅಂಗಡಿ ರವಿ
ಕೂಡ್ಲಿಗಿ :-ಸರ್ಕಾರ ವಿದ್ಯಾವಂತ ನಿರುದ್ಯೋಗಿಪದವೀಧರರಿಗೆ ಚುನಾವಣೆ ಸಮಯದಲ್ಲಿ ತರಬೇತಿ ನೀಡಿ ಚುನಾವಣೆ ಕರ್ತವ್ಯಗಳಿಗೆ ನೇಮಿಸಿಕೊಳ್ಳಬೇಕು ಎಂದು ವಕೀಲರಾದ ಅಂಗಡಿ ರವಿ ನುಡಿದರು. ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಪೋಲಿಸ್ ಇಲಾಖೆ ಹಾಗೂ ಸರ್ಕಾರಿ ನೌಕರರ ಕರ್ತವ್ಯ ಕುರಿತು ಪತ್ರಕರ್ತರಿಗೆ ಹೇಳಿದರು ಸರ್ಕಾರ ವಿದ್ಯಾವಂತ ನಿರುದ್ಯೋಗಿ ಪದವೀಧರರಿಗೆ ಯುವಕರಿಗೆ ಚುನಾವಣೆಯ ಸಮಯದಲ್ಲಿ ತರಬೇತಿ ಕೊಟ್ಟು ಚುನಾವಣೆಗಳ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ಸೇರಿಸಿಕೊಳ್ಳಬೇಕು.ಪೋಲಿಸ್ ಮತ್ತು ಸರ್ಕಾರಿ ಇಲಾಖೆ ಅಧಿಕಾರಿಗಳ ಆರೋಗ್ಯ ಕಾಪಾಡಬೇಕೆಂದು ವಕೀಲರಾದ ಅಂಗಡಿ ರವಿ ಅಭಿಪ್ರಾಯಪಟ್ಟರು. ಪ್ರತಿಯೊಂದು ವಿಷಯಕ್ಕೆ ಪೋಲಿಸ್ ಇಲಾಖೆಯವರು ಮುಂದೆ ಬರಬೇಕು ಪೋಲಿಸ್ ಇಲಾಖೆ ಇಲ್ಲ ಅಂದರೆ ತುಂಬಾ ಕಷ್ಟ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ರಜೆ ಅನ್ನುವುದೇ ಇರುವುದಿಲ್ಲ ಚುನಾವಣೆ ನೀತಿ ಸಂಹಿತೆ ಬಂದ ನಂತರ , ಚೆಕ್ ಪೋಸ್ಟ್ ನಲ್ಲಿ ಬಿಸಿಲನ್ನೂ ಲೆಕ್ಕಿಸದೇ, ಹಾಗೂ ಹಬ್ಬ ಜಾತ್ರೆ ಅಂತ ಅವರನ್ನು ಸರ್ಕಾರ ನಿಯೋಜನೆ ಮಾಡುತ್ತದೆ. ಪೊಲೀಸ್ ಇಲಾಖೆಯವರಿಗೆ ರಜೆ ಅನ್ನುವುದೇ ಇರುವುದಿಲ್ಲ ಅವರ ಆರೋಗ್ಯ ತುಂಬಾ ಹದಗಟ್ಟಿ ಹೋಗುತ್ತದೆ ಆದ್ದರಿಂದ ಸರ್ಕಾರ ಮುಂದಿನ ದಿನಗಳಲ್ಲಿ ಪೊಲೀಸರ ಬಗ್ಗೆ ಕಾಳಜಿ ವಹಿಸಬೇಕು. ವಿಧಾನಸಭಾ ಚುನಾವಣೆ ಇರುವುದರಿಂದ ವಿದ್ಯಾವಂತ ಯುವಕರಿಗೆ ಕೆಲಸ ಕೊಡಬಹುದು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಚ್ ವೆಂಕಟೇಶ್ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರು, ಮಾತನಾಡಿ ಬಿಎ, ಬಿಕಾಂ ಬಿಎಸ್ಸಿ ಬಿಎಡ್ ವಿದ್ಯಾಭ್ಯಾಸ ಮುಗಿಸಿಕೊಂಡು ಬೇಕಾದಷ್ಟು ವಿದ್ಯಾರ್ಥಿಗಳು ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಇಂತಹ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಅವರಿಗೆ ತರಬೇತಿ ನೀಡಿ ಚುನಾವಣೆಯ ಕರ್ತವ್ಯಗಳಿಗೆ ಸೇರಿಸಿಕೊಳ್ಳುವುದರಿಂದ ಪೊಲೀಸ್ ಇಲಾಖೆಗೆ ಕಂದಾಯ ಇಲಾಖೆ ಸೇರಿದಂತೆ ಕೆಲವು ಸರ್ಕಾರಿ ನೌಕರರಿಗೆ ಅನುಕೂಲವಾಗುತ್ತದೆ ಏಕೆಂದರೆ ಪೋಲಿಸ್ ಇಲಾಖೆಯವರು ಆರೋಗ್ಯದಿಂದ ಇದ್ದರೆ ಸಮಾಜದಲ್ಲಿ ನಾವು ಸಹ ಶಾಂತಿ ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ ಕರಿಬಸಪ್ಪ ವಕೀಲರು, ಹೆಚ್ ರವಿ ವಕೀಲರು,ಎನ್, ದುರುಗೇಶ್, ವಕೀಲರು ಸೇರಿದಂತೆ ಇತರರು ಇದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
