ಟಿಕೆಟ್ ಕೈ ತಪ್ಪಿದರಿಂದ ಕಾಂಗ್ರೆಸನಲ್ಲಿ ಬಿನ್ನಮತ.

ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಮಣಿದು ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯರಲ್ಲಿ ಗುರುತಿಸಿಕೊಂಡಿದ್ದ ಸಿದ್ದು ಕೊಣ್ಣುರ ಅವರಿಗೆ ಟಿಕೆಟ್ ಕಾಂಗ್ರೆಸನ ಮೂರನೆ ಪಟ್ಟಿಯಲ್ಲಿ ಫೈನಲ್ ಆಗಿದ್ದು ಸ್ಥಳೀಯ ಆಕಾಂಕ್ಷಿಗಳಲ್ಲಿ ಬಿನ್ನಮತ ಮೂಡಿದೆ. ಸ್ಥಳೀಯ ಕಾಂಗ್ರೆಸ್ ಆಕಾಂಕ್ಷಿಗಳಾದ ಕಳೆದ ಇಪ್ಪತ್ತೈದು ವರ್ಷಗಳಿಂದ ಪಕ್ಷದಲ್ಲಿ ದುಡಿದು ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆ ಮಾಡಿ ಕ್ಷೇತ್ರದಲ್ಲಿ ಬೆಳಸಿದ ಡಾ. ಎ.ಆರ್.ಬೆಳಗಲಿ ಅವರು ಹಿರಿಯ ನಾಯಕ ಮತ್ತು ಸ್ಥಳಿಯ ಪ್ರಬಲ ಆಕಾಂಕ್ಷಿಯಾಗಿದ್ದು ಈಗ ಟಿಕೆಟ್ ಕೈತಪ್ಪಿದ್ದು ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ ಎಂದು ತಮ್ಮ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಡಾ. ಪದ್ಮಜೀತ ನಾಡಗೌಡ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಜನ ಸೇವೆ ಮಾಡುತ್ತಾ ಬಂದಿದ್ದು ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿ ಮತ್ತೊರ್ವ ಅಭ್ಯರ್ಥಿಗೆ ಟಿಕೆಟ್ ಘೋಷಿಣೆ ಆಗಿದ್ದರಿಂದ ತೀವ್ರ ಅಸಮಾಧಾನ ಬುಗಿಲೆದ್ದಿದೆ. 2019 ನೆರೆ ಸಂಕಷ್ಟ ಎದುರಾದಾಗ ಪ್ರತಿ ಹಳ್ಳಿಯ ಜನರಿಗೆ ತರಕಾರಿ,ಆಹಾರ ಕಿಟ್ಟ ನೀಡಿ ಕೋರೋನಾ ಮಹಾಮಾರಿ ಹರಡಿ ಜನ ಸಾಮಾನ್ಯರ ಬದಕು ಸಂಕಷ್ಟ ಅನುಭವಿಸುತ್ತಿರುವಾಗ ತರಕಾರಿ,ಆಹಾರ ಕಿಟ್ಟ ನೀಡಿ ಸೇವೆ ಗೈದು ಬಡ ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ನೂರಾರು ಜನರಿಗೆ ಸೇವೆ ಗೈದು ಹೆಸರು ಮಾಡಿದ ಪದ್ಮಜೀತ ನಾಡಗೌಡ ಕಡೆಗಣಿಸಿದ್ದು ಅವರ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಎಡೆ ಮಾಡಿದೆ. ರಬಕವಿ ನಾಡಗೌಡ ಕಣ್ಣಿನ ಆಸ್ಪತ್ರೆಯಲ್ಲಿ ಸೇರಿದ್ದ ಕಾರ್ಯಕರ್ತರು,ಅಭಿಮಾನಿಗಳು ಸೇರಿ ಪದ್ಮಜೀತ ನಾಡಗೌಡ ಅವರಿಗೆ ಟಿಕೆಟ್ ಸಿಗದಿದ್ದರೆ ತಮ್ಮ ಮುಂದಿನ ನಡೆ ಏನೆಂಬುವುದನ್ನು ಚರ್ಚಿಸಿ ಪಕ್ಷೇತ್ರವಾಗಿ ಅಭಿಮಾನಿಗಳು ಒತ್ತಾಯಿಸಿದರೆ ಸ್ಪರ್ಧೆಸುವುದಾಗಿ ಹೇಳಿದರು.

ವರದಿ.
ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
