ಕೂಡ್ಲಿಗಿಯ ಆರಾಧ್ಯ ದೇವರಾದ ಶ್ರೀ ಕೊತ್ತಲಾಂಜನೇಯ ಸ್ವಾಮಿಯ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.. ಕೂಡ್ಲಿಗಿ: ದಿನಾಂಕ 30-3-23 ಗುರುವಾರ ಕೂಡ್ಲಿಗಿ ಪಟ್ಟಣದ ಆರಾಧ್ಯ ದೇವರಾದ ಶ್ರೀ ಕೊತ್ತಲಾಂಜನೇಯ ಸ್ವಾಮಿಯ ರಥೋತ್ಸವವು ಶ್ರೀ ರಾಮ ನವಮಿ ದಿನಂದದು ನಡೆದಿದ್ದು ವಿಶೇಷ. ಸ್ವಾಮಿಯ ರಥೋತ್ಸವ ಸಾಯಂಕಾಲ ಐದು ಗಂಟೆಗೆ ಪ್ರಾರಂಭವಾಗಿತು, ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಸಂಚರಿಸಿ ಬೆಂಗಳೂರು ರಸ್ತೆಯಲ್ಲಿನ ಶ್ರೀ ಕೊತ್ತಲಾಂಜನೇಯ ಸ್ವಾಮಿಯ ಪಾದಗಟ್ಟೆ ವರೆಗೆ ಜರುಗಿತು. ರಥೋತ್ಸವಕ್ಕೆ ಬಾಳೆ ಹಣ್ಣು ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಭಕ್ತಾದಿಗಳು ರಥೋತ್ಸವಕ್ಕೆ ಆಗಮಿಸಿದ್ದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
