ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾಗಿ ಮಾಕುಂಟೆ ಕಲ್ಲೇಶ್ ಅವರು ಆಯ್ಕೆಯಾದರು!! ಕೂಡ್ಲಿಗಿ: ರಾಜ್ಯದಲ್ಲಿ ನೂತನವಾಗಿ ಹೊಸ ಪಕ್ಷವನ್ನು ಕಟ್ಟಿರುವ ಬಳ್ಳಾರಿ ಗಣಿ ಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಈಗಾಗಲೇ ಇಡೀ ರಾಜ್ಯದಲ್ಲಿ ತನ್ನದೇ ಆದ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು. ಈ ಪಕ್ಷವನ್ನು ಮೆಚ್ಚಿ ರಾಜ್ಯದ ಜಿಲ್ಲಾ ಮತ್ತು ತಾಲೂಕುಗಳ ಕೆಲವು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರುಗಳು ಕರ್ನಾಟಕ ರಾಜ್ಯದ ಹೊಸ ಪಕ್ಷವಾದ ಕೆ ಆರ್ ಪಿ ಪಿ ಪಕ್ಷವನ್ನು ಸೇರುತ್ತಿದ್ದು ಇದರ ಮುಂದುವರಿದ ಭಾಗವಾಗಿ ಈಗಾಗಲೇ ಮುಂದಿನ ವಿಧಾನಸಭಾ ಚುನಾವಣೆಗೆ ಘೋಷಣೆಯಾಗಿದ್ದು, ಅದಕ್ಕಾಗಿ ಮುಂಬರುವ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೂಡ್ಲಿಗಿ ತಾಲೂಕಿನಲ್ಲಿರುವ ಕೆಲವು ಮುಖಂಡರುಗಳು ಹಾಗೂ ಯುವಕರು ಜನಾರ್ದನ ರೆಡ್ಡಿ ಸ್ಥಾಪಿಸಿರುವ , ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕೂಡ್ಲಿಗಿ ತಾಲೂಕು ನೂತನ ಅಧ್ಯಕ್ಷರಾಗಿ ಮಾಕುಂಟೆ ಕಲ್ಲೇಶ್ ಅವರು ಆಯ್ಕೆಯಾದರು. ಇವರ ಆಯ್ಕೆಯನ್ನು ಕೆ ಆರ್ ಪಿ ಪಿ ವಿಜಯನಗರ ಜಿಲ್ಲಾ ಅಧ್ಯಕ್ಷ ಕೆ. ರೇವಣಸಿದ್ದಪ್ಪ ಅವರು ಆಯ್ಕೆ ಪತ್ರ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೆಣ್ಣೆ ಕೊಟ್ರೇಶ್, ಟಿ.ಜಿ.ಪವನ್ ಕುಮಾರ್, ಸೂಲದಹಳ್ಳಿ ರಮೇಶ್, ಕಂಚೋಬನಹಳ್ಳಿ ರೇವಣ್ಣ ಗೋವಿಂದಗಿರಿ ಚಿತ್ತಪ್ಪ ಇತರರು ಇದ್ದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
