ಮಹಾಲಿಂಗಪುರದಲ್ಲಿ ಗಾಂಧಿ ಪುತ್ಥಳಿ ಲೋಕಾರ್ಪಣೆ

ಮಹಾಲಿಂಗಪುರ: ಸ್ಥಳೀಯ ಗಾಂಧಿ ವೃತ್ತದಲ್ಲಿ ೨೦೨೨-೨೩ ನೇ ಸಾಲಿನ ಪುರಸಭಾ ಅನುದಾನ ₹ ೧೮ ಲಕ್ಷ ವೆಚ್ಚದಲ್ಲಿ ಸ್ಥಾಪಿಸಲ್ಪಟ್ಟ ೬.೫ ಅಡಿ ಎತ್ತರದ ೪೦೦ ಕೆಜಿ ತೂಕದ ಕಂಚಿನ ಭವ್ಯ ಗಾಂಧಿ ಪುತ್ಥಳಿಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಲೋಕಾರ್ಪಣೆ ಮಾಡಿದರು.
ಭಾನುವಾರ ಸಂಜೆ ಸ್ಥಳೀಯ ಕೆಇಬಿ ಗಣೇಶ ದೇವಸ್ಥಾನದಿಂದ ಗಾಂಧಿವೃತ್ತದವರೆಗೆ ಜಾಂಜ್ ಪಥಕ, ಕರಡಿ ಮಜಲು, ಡೊಳ್ಳಿನ ಮೇಳದೊಂದಿಗೆ ಸಾವಿರಾರು ಯುವಕರು ಕೇಸರಿ ಧ್ವಜ ಹಾರಿಸುತ್ತಾ ಭವ್ಯ ಮೆರವಣಿಗೆಯೊಂದಿಗೆ ಆಗಮಿಸಿ ಮಹಾತ್ಮ ಗಾಂಧಿಜೀ ಪುತ್ಥಳಿ ಅನಾವರಣ ಮಾಡಲಾಯಿತು.

ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ, ಮುಖಂಡರಾದ ಬಸವರಾಜ ಕೊಣ್ಣೂರ, ಈರಪ್ಪ ದಿನ್ನಿಮನಿ, ಮನೋಹರ ಶಿರೋಳ, ಜಿ. ಎಸ್. ಗೊಂಬಿ, ಪ್ರಕಾಶ ಜೀರಗಾಳ, ಪುರಸಭಾ ಸದಸ್ಯರಾದ ಪ್ರಹ್ಲಾದ ಸಣ್ಣಕ್ಕಿ, ತಿಪ್ಪಣ್ಣ ಬಂಡಿವಡ್ಡರ, ಅರ್ಜುನ ಮೋಪಗಾರ, ರಾಜು ಬಗನಾಳ, ಶ್ರೀಶೈಲಗೌಡ ಪಾಟೀಲ, ಶಂಕರಗೌಡ ಮಹಾಲಿಂಗ ಮುದ್ದಾಪುರ ಮುಖ್ಯಾಧಿಕಾರಿ ಜಗದೀಶ ಈಟಿ, ಅನಿಲ ಕಿರಿಕಿರಿ,ಸುವರ್ಣಾ ಆಸಂಗಿ ಇತರರಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
