;

ಹೆಚ್.ಡಿ.ಪುರ ಜಿ.ಪಂ ವ್ಯಾಪ್ತಿಯ ತೇಕಲವಟ್ಟಿ ಗ್ರಾಮದಲ್ಲಿ ಮಾಜಿ ಸಚಿವ ಶ್ರೀ ಹೆಚ್.ಆಂಜನೇಯ ನೇತೃತ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು…!!!

ಹೆಚ್.ಡಿ.ಪುರ ಜಿ.ಪಂ ವ್ಯಾಪ್ತಿಯ ತೇಕಲವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಕೆಪಿಸಿಸಿ ಉಪಾಧ್ಯಕ್ಷ,ಮಾಜಿ ಸಚಿವ ಶ್ರೀ ಹೆಚ್.ಆಂಜನೇಯ ನೇತೃತ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು..

ಕಾಂಗ್ರೆಸ್ ಗ್ಯಾರಂಟಿ ಅಂಶಗಳಾದ 200 ಯುನಿಟ್ ಉಚಿತ ವಿದ್ಯುತ್, ಮನೆಯ ಹಿರಿಯ ಮಹಿಳಾ ಸದಸ್ಯೆಗೆ 2,000 ರೂಪಾಯಿ ಮಾಸಾಶನ, ಪ್ರತಿ ವ್ಯಕ್ತಿಗೂ 10ಕೆಜಿ ಉಚಿತ ಅಕ್ಕಿ ಜೊತೆಗೆ ನಿರುದ್ಯೋಗಿ ಪದವೀಧರರಿಗೆಂದೇ ಘೋಷಣೆಯಾದ ಯುವನಿಧಿ ಮಾಸಾಶನದ ಬಗ್ಗೆಯೂ ಪ್ರಸ್ತಾಪಿಸಿ, ನುಡಿದಂತೆ ನಡೆಯುವ ಕಾಂಗ್ರೆಸ್ ನಾಡಿನ ಮುಂದಿನ ಭರವಸೆ ಎಂಬುದಾಗಿ ನೆರೆದಿದ್ದ ಜನತೆಗೆ ಮನವರಿಕೆ ಮಾಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಟಿ.ಹನುಮಂತಪ್ಪ,ಮಾಜಿ ಜಿ. ಪಂ ಅಧ್ಯಕ್ಷ ಶ್ರೀಮತಿ ಇಂದಿರಾ ಕಿರಣ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಿಕೆ.ಶಿವಮೂರ್ತಿ,ಡಿಸಿಸಿ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು,ಕಾಂಗ್ರೆಸ್ ಹಿರಿಯ ಮುಖಂಡರು,ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಸುರೇಶ್, ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend