;

ಬೋಗಸ್ ಕಾಮಗಾರಿ ಬಿಲ್ ಪಾವತಿ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಡಿಸಿಗೆ ದೂರು ನೀಡಿದ ಮಾಜಿ ಸಚಿವ ಆಂಜನೇಯ… “!!

ಹೊಳಲ್ಕೆರೆ ಕ್ಷೇತ್ರದಲ್ಲಿ ನಡೆದಿರುವ ಬೋಗಸ್ ಕಾಮಗಾರಿ ಬಿಲ್ ಪಾವತಿ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಡಿಸಿಗೆ ದೂರು ನೀಡಿದ ಮಾಜಿ ಸಚಿವ ಆಂಜನೇಯ..

ಎಷ್ಟೋ ಕಾಮಗಾರಿ ನಡೆಸದೆಯೇ ಅಕ್ರಮವಾಗಿ ಬಿಲ್‌ಗಳನ್ನು ಮಾಡಿಸಿ ಹಣ ಲಪಟಾಯಿಸಲು ಹೊರಟಿದ್ದಾರೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪನವರ ವಿರುದ್ದ ಮಾಜಿ ಸಚಿವ ಹೆಚ್.ಆಂಜನೇಯ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಕೆರೆಗಳಲ್ಲಿ ಅಲ್ಪ ಸ್ವಲ್ಪ ಕೆಲಸ ನಡೆಸಿ ಬಿಲ್‌ಗಳನ್ನು ಮಾಡಿಸಿಕೊಳ್ಳುತ್ತಿರುವುದಲ್ಲದೇ , ತಾಲೂಕಿನಲ್ಲಿ ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಹಣ ಲೂಟಿ ಹೊಡೆಯಲಾಗಿದೆ. ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯಲ್ಲಿ ಸುಮಾರು ಮೂರು ಸಾವಿರ ಎಕರೆ ಅಮೃತ ಮಹಲ್ ಕಾವಲು ಜಮೀನನ್ನು ಖಾಸಗಿಯವರಿಗೆ ಕೊಡಲು ತಂತ್ರಗಾರಿಕೆ ರೂಪಿಸಿದ್ದು, ಇದರ ಹಿಂದೆ ದೊಡ್ಡ ಹಗರಣವಿದೆ. ಅಲ್ಲದೇ ತಾಲ್ಲೂಕಿನಾದ್ಯಂತ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಗದರಿಸಿ ಬಿಲ್‌ಗಳಿಗೆ ಸಹಿ ಮಾಡಿಸಿಕೊಳ್ಳುತ್ತಿರುವ ಶಾಸಕ ಎಂ.ಚಂದ್ರಪ್ಪನ ದೊಡ್ಡ ಪಟಾಲಂ ಇದೆ. ಹೊಳಲ್ಕೆರೆಯಲ್ಲಿ 19 ರಂದು ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದು, ಎಷ್ಟು ಸರಿ. ಇದೊಂದು ಪಕ್ಷದ ಕಾರ್ಯಕ್ರಮ ಎನ್ನುವುದನ್ನು ಜಿಲ್ಲಾಡಳಿತ ಮರೆತಂತಿದೆ. ತಾಲೂಕಿನಲ್ಲಿ ಎಷ್ಟೋ ಅಧಿಕಾರಿಗಳು ಶಾಸಕ ಎಂ.ಚಂದ್ರಪ್ಪನವರ ದರ್ಪಕ್ಕೆ ಹೆದರಿ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹಗರಣಗಳ ತನಿಖೆಯಾಗದೆ ಯಾವುದೇ ಬಿಲ್‌ಗಳಿಗೆ ಸಹಿಯಾಗಬಾರದು ಎಂದು ಹೆಚ್.ಆಂಜನೇಯ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ, ವಕೀಲರುಗಳಾದ ಸುದರ್ಶನ್, ಬೀಸ್ನಳ್ಳಿ ಜಯಣ್ಣ, ಶರಣಪ್ಪ, ರವಿ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು…

ವರದಿ. ಸುರೇಶ್. ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;