;

ವಿಜೃಂಭಣೆಯಿಂದ ಜರುಗಿದ, ಎಂ, ಬಿ, ಅಯ್ಯನಹಳ್ಳಿಯ ಶ್ರೀ ಆಂಜಿನೇಯ ಸ್ವಾಮಿ ರಥೋತ್ಸವ…!!!

ಕೂಡ್ಲಿಗಿ ತಾಲೂಕಿನ, ವಿಜಯನಗರ ಜಿಲ್ಲೆಯ, ಎಂ, ಬಿ, ಅಯ್ಯನಹಳ್ಳಿಯಲ್ಲಿ ನಿನ್ನೆ ಸಂಜೆ ಜರುಗಿದ ಶ್ರೀ ಆಂಜಿನೇಯ ಸ್ವಾಮಿ ರಥೋತ್ಸವ, ಹಾಗೂ ಪ್ರತಿವರ್ಷದಂತೆ ಈ ವರ್ಷವು ಸಹ ವಿಜೃಂಭಣೆಯಿಂದ ಸ್ವಾಮಿಯ ರಥೋತ್ಸವ ಹಲವಾರು ವಾದ್ಯ, ಹಾಗೂ ನಂದಿಕೋಲು ಕುಣಿತ, ಕೋಲಾಟ ಹಾಡುವುದರ ಮೂಲಕ ಎಲ್ಲಾ ಧರ್ಮದ ಭಕ್ತಾದಿಗಳು ಉದ್ಭವ ಮೂರ್ತಿಗೆ ತಮ್ಮ ಒಂದು ಭಕ್ತಿಯನ್ನು ಸಮರ್ಪಣೆ ಮಾಡಲಾಯಿತು.


ಹಾಗೂ ಚಂದ್ರದರ್ಶನ ಪಡೆದ ನಂತರ ಗ್ರಾಮದ ಎಲ್ಲಾ ಭಕ್ತರು ಶ್ರೀ ಸ್ವಾಮಿಗೆ ತಮ್ಮ ಒಂದು ನಮನಗಳನ್ನು ಸಲ್ಲಿಸಿ ಆ ದಿನ ರಾತ್ರಿ ಪೂರ್ತಿಯಾಗಿ ಗ್ರಾಮದ ಎಲ್ಲಾ ಬೀದಿಗಳಲ್ಲಿ ಎಲ್ಲಾ ಭಕ್ತರ ಒಂದು ದರ್ಶನಕ್ಕೆ ಉಲಾಯಿ ಆಡುತ್ತ ಬೆಳಗಿನ ಜಾವದಲ್ಲಿ ತನ್ನ ಒಂದು ಸ್ಥಳಕ್ಕೆ ಬಂದು ನೆಲೆಯೂರಿದ ಸ್ವಾಮಿ, ಮತ್ತೆ ಬೆಳಗ್ಗೆ, ಉಚ್ಚಯವನ್ನು ಏರಿದ ಸ್ವಾಮಿ ತನ್ನ ಒಂದು ಪರ್ಯಾಟನೆಯನ್ನು ಮುಂದುವರೆಸಿ, ಸಂಜೆಗೆ ಯಥಾ ರೀತಿಯಂತೆ ದೊಡ್ಡರಥೋತ್ಸವಕ್ಕೆ ಭಕ್ತ ಸಮೂಹಕ್ಕೆ ಅನುವನ್ನು ಮಾಡಿಕೊಡುತ್ತ, ರಥವನ್ನು ಏರಿ ಸ್ವಗ್ರಾಮದ ಭಕ್ತರಿಗೆ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿನ ಭಕ್ತರಿಗೆ ತನ್ನ ಆಶೀರ್ವಾದವನ್ನು ಮಾಡಿ,ಪಾದಗಟ್ಟೆಯತ್ತೀರಾ ಸಾಗುತ್ತಾ ಸಾಗಿದ ರಥೋತ್ಸವದಲ್ಲಿ ಭಕ್ತಸಮೂವಹಕ್ಕೆ ಆಶೀರ್ವಾದಮಾಡಿ ಮತ್ತೆ ಹಿಂತಿರುಗಿ ತನ್ನ ಮೂಲ ಸ್ಥಾನಕ್ಕೆ ಸಾಗುತ್ತಾ .ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ರಥದ ಬಳಿ ತಂದು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು ಸ್ವಾಮಿಗೆ ಜಯ ಘೋಷಗಳನ್ನು ಕೂಗಿದರು ಹಾಗೂ ರಥೋತ್ಸವ ಮುಂದೆ ಸಾಗುತ್ತಿದ್ದಂತೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು ರಥವನ್ನು ಪಾದಗಟ್ಟಿಯವರಿಗೆ ಎಳೆದು ವಾಪಸ್ ಮೂಲಸ್ಥಾನಕ್ಕೆ ತರಲಾಯಿತು ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ನೆರವೇರಿದವು ಗ್ರಾಮಸ್ಥರು ಸೇರಿ ಸುತ್ತಲಿನ ಹಳ್ಳಿಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು,..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;