ಶ್ರೀ ಆಂಜೇಯಸ್ವಾಮಿ ಯ ಬ್ಯಾಟಿ ಗಿಡದ ಉತ್ಸವ. ಹಾಗೂ ಬೆಲ್ಲ ಕಚ್ಚುವ ಕಾರ್ಯ ಕ್ರಮ
ಹ.ಬೊ. ಹಳ್ಳಿ. ಯುಗಾದಿ ಹಬ್ಬ ಬಂತೆಂದರೆ ಸಾಕು ಗ್ರಾಮೀಣ ಭಾಗ ದಲ್ಲೀ ಕೆಲವು ದೇವಸ್ಥಾನ ಗಳಲ್ಲಿ ಮುಳ್ಳಿನ ಪವಾಡ ಅಂದರೆ ಮುಳ್ಳಿನ ಮೇಲೆ ಓಂಡಾಡು ವುದು. ಮುಳ್ಳಿನ ಮೇಲೆ ಮಲಗುವುದುಇನ್ನುಆನೇಕ. ಕಾರ್ಯ ಕ್ರಮಗಳು ಜರಗುತ್ತವೆ. ತಾಲೂಕಿನ ಮಾಲವಿ ಗ್ರಾಮದಲ್ಲಿ ನೂತನ ವಾಗಿ ಶ್ರೀ ಮುದ್ದಿ ಬಸವೇಶ್ವರ ದೇವಸ್ಥಾನದ ನಿರ್ಮಾಣ ಕಾರ್ಯ ಮುಗಿದಿದ್ದು ಶ್ರೀ ಮುದ್ದಿ ಬಸವೇಶ್ವರ ನ ಮೂರ್ತಿ ಪ್ರತಿಷ್ಟಾಪನೆ ಮಾಡಲಾಯಿತು . ಹಾಗೂ ಮದ್ಯಾಹ್ನ. 1-00 ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ನಂತರ ಸಾಯಂಕಾಲ 6-00ಗಂಟೆಗೆ ಶ್ರೀ ಅಂಜನೇಯನ ಭಕ್ತರಾದ ದಾಸಪ್ಪನವರಿಂದ, ಬ್ಯಾ ಟಿ ಗಿಡದ ಉತ್ಸವ ಮತ್ತು ಬೆಲ್ಲ ಕಚ್ಚುವ ಕಾರ್ಯಕ್ರಮ ಸಕಲ ವಾದ್ಯಗಳೊಂದಿಗೆ, ಸಾವಿರಾರು ಭಕ್ತರ ಮದ್ಯ ನಡೆಯಿತು . ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ಶ್ರೀ ಅಂಜೀನೆಯನ ಪಟಾಕ್ಷಿ ಹರಾಜು ನಡೆಯುತ್ತದೆ. ಈ ಹರಾಜಿನಲ್ಲಿ ಇದೆ ಗ್ರಾಮದ ಅಗಸರ ಮಾರುತಿ ಅವರು 12101 ರೂ. ಗಳಿಗೆ ತಮ್ಮದಾಗಿಸಿಕೊಂಡರು. ಗ್ರಾಮದ ಸುತ್ತ ಮುತ್ತಲಿನ ಭಕ್ತರು .ಹಾಗೂ ದೇವಸ್ಥಾನ ದ ಕಮಿಟಿ ಯವರು. ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
