;

ಭ್ರಷ್ಟ ಗ್ರಾಮ ಪಂಚಾಯತ್ ಅವ್ಯವಸ್ಥೆ ಬಡಿವಾರದ ಆಡಳಿತಕ್ಕೆ ಸಾರ್ವಜನಿಕರ ಬದುಕು ಬೀದಿಗೆ????

ಗ್ರಾಮ ಪಂಚಾಯತ್ ಅವ್ಯವಸ್ಥೆ ಸಾರ್ವಜನಿಕರ ಸಮಸ್ಯೆ ಕೇಳವರಿಲ್ಲ ಚರಂಡಿ ನೀರು ಕುಡಿಯುವ ನೀರಿನಲ್ಲಿ ಮಿಶ್ರಣ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಮೇಕಳಿ ಗ್ರಾಮದಲ್ಲಿ
ಅಶೋಕ ಸುತ್ತಾರ ಮನೆಯಿಂದ ಜೈಟ್ ಗೋಳ ತೋಟದವರೆಗೆ ಇರುವ ಚರಂಡಿಯಲ್ಲಿ ಹರಿಯುವ ತ್ಯಾಜ್ಯದ ನೀರು ಮತ್ತು ಸಾರ್ವಜನಿಕ ಶೌಚಾಲಯದ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಸರಿಯಾಗಿ ಚರಂಡಿ ನಿರ್ಮಿಸದೆ ಇದ್ದ ಚರಂಡಿಯನ್ನು ಸ್ವಚ್ಛ ಗೊಳಿಸದೆ ಅಲ್ಲಲ್ಲಿ ಬ್ಲಾಕ್ ಆಗಿ ಚರಂಡಿಯ ನೀರು ರಸ್ತೆ ಮೇಲೆ ಹರಿದು ಹೋದರು ಇದರ ಬಗ್ಗೆ ಗಮನ ಹರಿಸದ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು.

ಕುಡಿಯುವ ನೀರಿನಲ್ಲಿ ಚರಂಡಿ ನೀರು ಬರುತ್ತಿದೆ ಎಂದು ಸಾರ್ವಜನಿಕರು ಸದರಿ ಗ್ರಾಮ ಪಂಚಾಯತಗೆ ತಿಳಿಸಿದರು ಈ ಸಮಸ್ಯೆ ಸುಮಾರು ಒಂದು ತಿಂಗಳು ಕಳೆದರು ಈ ವಿಷಯದ ಕುರಿತು ತಿಳಿಸಿದ ನಂತರ ಅಲ್ಲಿ ವಾಸಿಸುವ ಜನಗಳಿಗೆ ನೀರಿನ ಸರಬರಾಜು ನಿಲ್ಲಿಸಿದ ಪಂಚಾಯತ್ ಸಿಬ್ಬಂದಿಗಳು ಸುಮಾರು ಎಂಟು ದಿನಗಳು ಕಳೆದರು ಮೂಲ ಸೌಕರ್ಯ ಒದಗಿಸದೆ ರೀತಿ ಗ್ರಾಮಗಳು ಏಕೆ ಹೀಗೆ ಹೇಲು ಗ್ರಾಮ ಆಗಿವೆ ಎಂದರೆ ಭ್ರಷ್ಟ ಪಿಡಿಒ ಗಳು, ಕಳ್ಳ ಅಧ್ಯಕ್ಷ, ಸದಸ್ಯರು, ಖದೀಮ ಗುತ್ತಿಗೆದಾರರು ಊರು ಲೂಟಿ ಮಾಡಿರುತ್ತಾರೆ ಇದರಿಂದ ಗ್ರಾಮಗಳು ಈ ರೀತಿ ಹಾಳಾಗಿವೆ. ಇತ್ತ ಕಡೆಗೆ ನೋಡದ ಅಧಿಕಾರಿಗಳು ಇನ್ನಾದರೂ ಅಧಿಕಾರಿಗಳು ಎಚ್ಚತ್ತು ಈ ಸಮಸ್ಯೆಯನ್ನು ಪರಿಹರಿಸಿ ಜನರಿಗೆ ಮೂಲ ಸೌಕರ್ಯ ಒದಗಿಸಿ ಕೊಡಲಿ ಎಂದು ಎಚ್ಚರಿಕೆ ಪತ್ರಿಕೆ ಆಶಯ.

ವರದಿ :ಮಹಾಲಿಂಗ ಎಚ್ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;