ಜನರ ದಿಕ್ಕು ತಪ್ಪಿಸಿದ ಸ್ವಾಭಿಮಾನದ ಹೋರಾಟ…
ಹೌದು ವೀಕ್ಷಕರೇ ಈ ಘಟನೆ ನಡೆದದ್ದು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ…
2023 ರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಆಕಾಂಕ್ಷಿಗಳು ರಾಮದುರ್ಗ ತಾಲ್ಲೂಕಿನ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ,
ಅದೆ ರೀತಿ ನಿನ್ನೆ ದಿನ ರಾಮದುರ್ಗದಲ್ಲಿ ಶ್ರೀ ಚಿಕ್ಕರೇವಣ್ಣ ಅಭಿಮಾನಿ ಬಳಗದವರು ರಾಮದುರ್ಗ ಕ್ಷೇತ್ರದ ಸಮಸ್ತ ಅಭಿವೃದ್ಧಿ ಹಾಗೂ ಪ್ರಗತಿಗಾಗಿ “ಸ್ವಾಭಿಮಾನದ ಹೋರಾಟ” ವನ್ನು ರಾಮದುರ್ಗದ ಕುದರೆ ಬೈಲ ಮೈದಾನದಲ್ಲಿ ಹಮ್ಮಿಕೊಂಡಿದ್ದರು,
ಈ ಕಾರ್ಯಕ್ರಮಕ್ಕೆ ತಾಲೂಕಿನ ಸಾಕಷ್ಟು ಪ್ರಮಾಣದಲ್ಲಿ ಜನಸಾಗರ ಸೇರಿತು…
ಆದರೆ…….
ಸೇರಿದಂತ ಜನರಲ್ಲಿ ಏನು ಒಂದ ತರ ತಳ ಗೊಂದಲದ ವಾತಾವರಣ ಶುರುವಾಗಿತ್ತು…
ಜನರ ತಳ ಮಳ ಗೊಂದಲ ನೋಡಿದ ಮಾಧ್ಯಮದವರು ಜನರನ್ನು ಕೇಳಿದಾಗ ಒಂದೊಂದೇ ಸಂತ್ಯಾಶ ಹೊರಗೆ ಬಿತ್ತು….
ಜನ ಮಾಧ್ಯಮದವರಿಗೆ ಹೇಳ್ಳಿದ್ದು ಇಷ್ಟೇ
ನಾವು ಮಹಿಳಾ ಸಂಘದವರು ಸರಕಾರದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ನೀವು ಕಾರ್ಯಕ್ರಮಕ್ಕೆ ಬಂದರೆ ಸರಕಾರದ ಸೌಲಭ್ಯ ಸಿಗುತ್ತೆದೆ ಅದಕ್ಕೆ ನೀವು ಕಡ್ಡಾಯವಾಗಿ ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ಹೇಳಿದಾರೆ, ಎಂದು ಮಾಧ್ಯಮದವರ ಮುಂದೆ ಹೇಳಿದರು ಮತ್ತು ಹಳ್ಳಿಯ ಮುಗ್ದ ಜನರಿಗೆ ಕಾಂಗ್ರೆಸ್ ಪಕ್ಷದ ಜನರಿಗೆ ಕಾಂಗ್ರೆಸ್ ಕಾರ್ಯಕ್ರಮ ಇದೆ, ಬಿಜೆಪಿ ಪಕ್ಷದ ಜನರಿಗೆ ಬಿಜೆಪಿ ಕಾರ್ಯಕ್ರಮ ಇದೆ ಎಂದು ಹೇಳಿ ಕರೆದುಕೊಂಡು ಬಂದಿದರಂತೆ…
ಹೀಗೆ ಜನರ ಗೊಂದಲದಲ್ಲಿ ಚಪ್ಪಾಳೆ ಹೊಡೆಯುವ ಮೂಲಕ ಕಾರ್ಯಕ್ರಮ ಮುಗಿಸಿದರು….

ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
