,ದಲಿತ ಕಾಲೋನಿಯಲ್ಲಿ ಸಿ. ಸಿ. ರಸ್ತೆ ದುರಸ್ತಿಗೊಳಿಸಿ ಎರಡು ಚರಂಡಿ ವ್ಯವಸ್ಥೆ ಮಾಡಿ
ಕಾನ ಹೊಸಹಳ್ಳಿ :- ಸಮೀಪದ ಸಿದ್ದಾಪುರ ಗ್ರಾಮದ ದಲಿತ ಕಾಲೋನಿಯ ಹೊಸಹಳ್ಳಿಗೆ ಹೋಗುವ ಮುಖ್ಯ ರಸ್ತೆಯಿಂದ ಮೂರ್ತಿ ಮನೆಯವರಿಗೆ ಸಿಸಿ ರಸ್ತೆಯನ್ನು ದುರಸ್ತಿಗೊಳಿಸಿ 15 ವರ್ಷದ ಹಿಂದೆ ಮಾಡಿದ ಈ ರಸ್ತೆಯು ಸಂಪೂರ್ಣ ಹಾಳಾಗಿದ್ದು ಸಾರ್ವಜನಿಕರ ನಲ್ಲಿಯ ನೀರು ಹಾಗೂ ಬಚ್ಚಲು ನೀರು ಓಡಾಡುವ ರಸ್ತೆಯಲ್ಲಿ ಹರಿಯುತ್ತಿದ್ದು. ಮನೆಗಳ ಮುಂದೆ ಸದಾಕಾಲ ನೀರು ಹರಿಯುತ್ತದೆ. ಇಲ್ಲಿಯ ನೀರಲ್ಲ ಹರಿದು ಹೋಗಿ ಚರಂಡಿಗೆ ಸೇರುತ್ತದೆ ಚರಂಡಿಯು ಕೂಡ ಸಂಪೂರ್ಣ ಹಾಳಾಗಿದ್ದು ಹರಿದ ನೀರೆಲ್ಲ ಬಂದು ಸಲೀಸಾಗಿ ಚರಂಡಿಯಲ್ಲಿ ನೀರು ಹರಿಯದೆ ವಾಸಿಸುವ ಕುಟುಂಬಗಳ ಮುಂದೆ ನಿಲ್ಲುತ್ತದೆ. ಗ್ರಾಮದಲ್ಲಿ ಒಂದೇ ಚರಂಡಿ ಇದ್ದು ಈ ಅವ್ಯವಸ್ಥೆಗೆ ಕಾರಣವಾಗಿದೆ ಸುಮಾರು ಬಾರಿ ಅಂಬೇಡ್ಕರ್ ಕಾಲೋನಿಯಿಂದ ಮಲಿ ಯಮ್ಮ ದೇವಸ್ಥಾನದವರೆಗೆ ಎರಡು ಚರಂಡಿಗಳನ್ನು ನಿರ್ಮಿಸಿ ಕೊಡುವಂತೆ ಕೇಳಿಕೊಂಡಿರುತ್ತೇವೆ ಆದರೂ ಕೂಡ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಗ್ರಾಮದಲ್ಲಿ ಎರಡು ಚರಂಡಿಯನ್ನು ನಿರ್ಮಿಸಿ ಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಂದೇ ಚರಂಡಿ ಇರುವುದರಿಂದ ನೀರು ಹರಿದು ಹೋಗದೆ ಅಲ್ಲಲ್ಲಿ ನಿಂತು ಮನೆಗಳ ಮುಂದೆ ಗೊಬ್ಬ ವಾಸನೆ ಹಾಗೂ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದೆ. ದಲಿತ ಕಾಲೋನಿಯಲ್ಲಿ ಬಹಳಷ್ಟು ಜನರಿಗೆ ಜ್ವರ ಮತ್ತು ಚಳಿ ಮುಂತಾದ ಸಾಂಕ್ರಾಮಿಕ ರೋಗ ಹರಡುವ ಬೀತಿಯಲ್ಲಿದ್ದಾರೆ…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
