.ಹಾರಕಬಾವಿಯಲ್ಲಿ, ಶ್ರೀ ವೇದಮೂರ್ತಿ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ, ಸರ್ ಎಂ ವಿ ಶಾಲೆಯ ಕಟ್ಟಡ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಕಣ್ವ ಕುಪ್ಪೆ, ಗವಿಮಠದ ಶ್ರೀ ಷ, ಬ್ರ, ಡಾ: ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಆಶೀರ್ವಚ ನದಲ್ಲಿ,ಮಕ್ಕಳು ತಿನ್ನುವ ಜಂಕ್ ಫುಡ್ ಬಗ್ಗೆ ಮಾತನಾಡಿ ರಾಗಿ ಜೋಳ ಮುಂತಾದ ಸಿರಿಧಾನ್ಯಗಳ ಬಗ್ಗೆ ಸೇವಿಸಲು ಸಲಹೆ ಕೊಟ್ಟು, ಅದರಕ್ಕೆ ಕಹಿ ಉದರಕ್ಕೆ ಸಿಹಿ ಎಂದು ಹೇಳಿ ನಂತರ ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿವೆ, ಆ ಮೌಲ್ಯಗಳನ್ನು ಉಳಿಸಿಕೊಳ್ಳಲು ಧರ್ಮ ಸಂಸ್ಕೃತಿ ಬೆಳೆಸಬೇಕು ಸಂಸ್ಕಾರಗಳನ್ನು ಕಲಿಸಬೇಕು,ಉಳಿಸಬೇಕು ಎಂದು ಹೇಳುವ ಮೂಲಕ ಆಶೀರ್ವಚನ ನೀಡಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ D ಬಸೆಟೆಪ್ಪ KAS ಲೆಕ್ಕಪರಿಶೋಧಕರು ಸಹಕಾರ ಇಲಾಖೆ, ಇವರು ಮಾತನಾಡಿ ಮಕ್ಕಳು ಮುಗ್ಧ ಜೀವಿಗಳು ನಾನುಈಗ ಉನ್ನತ ಅಧಿಕಾರಿಯಾಗಿದ್ದರು, ಈ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕ ಆಗಿದ್ದಾಗ ಮಕ್ಕಳ ಜೊತೆ ತುಂಬಾ ಸಂತೋಷವಾಗಿದ್ದೆ ಮಕ್ಕಳು ಭಾವನಾ ಜೀವಿಗಳು, ಮಕ್ಕಳೇ ನೀವು ಶ್ರದ್ಧೆಯಿಂದ, ಆಸಕ್ತಿಯಿಂದ ಓದಿ, ಸಾಧನೆ ಮಾಡಿ ಉನ್ನತ ಅಧಿಕಾರಿಯಾಗಿ ಸಮಾಜ ಸೇವೆ ಮಾಡಲು ಸಲಹೆ ನೀಡಿದರು, ಅಧ್ಯಕ್ಷತೆಯನ್ನು ಎಸ್ ಸತೀಶ್ ವಹಿಸಿದ್ದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಕೆ ತಿಪ್ಪೇಸ್ವಾಮಿ, ಶ್ರೀ ಎನ್ಎಂ ರವಿಕುಮಾರ್,ಪ್ರಧಾನ ಕಾರ್ಯದರ್ಶಿಗಳು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ವಿಜಯನಗರ, ಶ್ರೀ ಕೆ ಜಂಬುನಾಥ್ ನಿವೃತ್ತ ಪ್ರಾಚಾರ್ಯರು, ಶ್ರೀ ಎಸ್
ಶೇಖರಪ್ಪ, ಮಾಜಿ ತಾಲೂಕ ಪಂಚಾಯತ್ ಸದಸ್ಯರು, ಹೆಚ್ ಬಿ ಮುನಿಯಪ್ಪ ಅಧ್ಯಕ್ಷರು ಗ್ರಾಮ ಪಂಚಾಯತಿ ಹಾರಕಬಾವಿ, ಹಾಗೂ ಉಪಾಧ್ಯಕ್ಷರಾದ ಡಿ ಶೇಖರ್, ಡಾಕ್ಟರ್ ಅರುಣ್ ಕುಮಾರ್ ಪಿ, ಮಕ್ಕಳ ತಜ್ಞರು ಚಿತ್ರದುರ್ಗ ಇನ್ನಿತರರು ಭಾಗವಹಿಸಿದ್ದರು, ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು, ಟ್ರಸ್ಟಿನ ಕಾರ್ಯದರ್ಶಿಗಳು ಸದಸ್ಯರು ಎಲ್ಲರೂ ಹಾಜರಿದ್ದರು, ಗೌರವಾಧ್ಯಕ್ಷರಾದ, ಎಸ್ ಕೊಟ್ರೇಶ್ ಸ್ವಾಗತಿಸಿದರು, ಶ್ರೀ ಎಂ ಟಿ ರೇವಣಸಿದ್ದಪ್ಪ ವಕೀಲರು ಇವರು ಪ್ರಾಸ್ತಾವಿಕ ನುಡಿಗಳನ್ನಾ ಡಿದರು, ಶ್ರೀ ಯರಿಸ್ವಾಮಿ ಎ ಶಿಕ್ಷಕರು ನಿರೂಪಿಸಿದರು, ಕೆ ಎಸ್ ಪ್ರಕಾಶ್ ಶಿಕ್ಷಕರು ವಂದನಾರ್ಪಣೆ ಸಲ್ಲಿಸಿದರು.ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
