ನಿಡಗುಂದಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ (JJM)ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ಸಾರ್ವಜನಿಕರಿಂದ ಆರೋಪ…!!!

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ ಜೀವನ ಮಿಷನ್ ಯೋಜನೆ (JJM) ಕಳಪೆ ಮಟ್ಟದ ಕಾಮಗಾರಿ ಮಾಡಿದ ಕಳ್ಳರ , ಭ್ರಷ್ಟ ಅಧಿಕಾರಿಗಳ ಗ್ಯಾಂಗ್!

ಜಲ ಜೀವನ ಮಿಷನ್ ಯೋಜನೆ ಕಳಪೆ ಮಟ್ಟದ ಕಾಮಗಾರಿ ಆಗಿದ್ದು ಕೂಡಲೇ ಈ ಯೋಜನೆಯ ಅನುದಾನದ ಹಣ 2 ಕೋಟಿ 35 ಲಕ್ಷ ಮೇಲ್ಪಟ್ಟ ಹಣ ಮರಳಿ ಸರಕಾರಕ್ಕೆ ಜಮಾ ಮಾಡಬೇಕು! ಡಿ ಎಸ್ ಚೌಗಲಾ ಗುತ್ತಿಗೆದಾರರು ಸಾ: ಸುಣದೊಳಿ ತಾ: ಮೂಡಲಗಿ ಗುತ್ತಿಗೆದಾರ ಲೈಸೆನ್ಸ್ ರದ್ದು ಪಡಿಸಬೇಕು ಹಾಗೂ ಲೈಸೆನ್ಸ್ ಕಪ್ಪು ಪಟ್ಟಿಗೆ ಸೇರಬೇಕು!

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ರಾಯಬಾಗ ಕಚೇರಿಯ ಭ್ರಷ್ಟ ಸೆಕ್ಷನ್ ಆಫೀಸರ ಎಸ್ ಎಸ್ ಕಂದಗಲ್ ಭ್ರಷ್ಟಾಚಾರ ಮಾಡುವುದರಲ್ಲಿ ಎತ್ತಿದ ಕೈ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದು ಪ್ರತಿ ಕಾಮಗಾರಿಗಳ ಫೈಲ್ ಸಹಿ ಮಾಡುವುದಕ್ಕೆ ಹಣ ತೆಗೆದುಕೊಳುವುದಕ್ಕೆ ಮುಂದಾಗುತ್ತಾರೆ! ಅನೇಕ ಗುತ್ತಿಗೆದಾರರು ನಮ್ಮ ಮುಂದೆ ಅಳಲು ತೋಡಿಕೊಂಡಿದ್ದಾರೆ. ಕಾಮಗಾರಿಯನ್ನು ಸರಿಯಾಗಿ ನೋಡುವುದಿಲ್ಲ ಇಂತಹ ಅಧಿಕಾರಿಗಳನ್ನು ಮೊದಲು ಕೆಲಸದಿಂದ ತೆಗೆದುಬಿಡಬೇಕು!

ಇದರಲ್ಲಿ ಬಾಗಿ ಆಗಿರುವ ಅಧ್ಯಕ್ಷ, ಸದಸ್ಯರು, ಗಳ ಸದಸ್ಯತ್ವ ರದ್ದು ಪಡಿಸಬೇಕು!

ಇದೆ ಸಂದರ್ಭದಲ್ಲಿ ಶ್ರೀ ಪುಟ್ಟುರಾಜ್ ಗವಾನೆ, ಶ್ರೀ ಜಿನೇಂದ್ರ ಖೆಮಲಾಪುರೆ, ಮೋಹನ ಭಜಂತ್ರಿ , ಸುನೀಲ ಕೆರೂರ, ಹಾಗೂ ಗ್ರಾಮಸ್ಥರು ಹಾಜರಿದ್ದರು..

ವರದಿ. ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend