ಹೂಡೇಂ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ
ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ತಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಚದುರಂಗ ಆಟ ಕೇರಂ ಆಟ . ಮತ್ತು ಸಾಧನೆ ಮಾಡಿರುವ ಮಹಿಳೆಯರ ಬಗ್ಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಶ್ರೀ ಕರಿಯಣ್ಣ ಕೆ ಇವರು ನಿರೂಪಣೆ ಮಾಡಿದರು.ಬಷೀರ್ ಖಾನ್ ಶಿಕ್ಷಕರು ಸ್ವಾಗತ.ಮಾಡಿದರು. ಹಿಂದಿ ಶಿಕ್ಷಕರಾದ ಇರ್ಫಾನ್ ಮೇಡಂ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಂಥಪಾಲಕರಾದ ಟಿ ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಓದುವ ಬೆಳಕು ಕಾರ್ಯಕ್ರಮ ಪ್ರಾರಂಭವಾದ ಬಗ್ಗೆ ಮತ್ತು ಅದು ನಡೆದು ಬಂದ ಹಾದಿಯನ್ನು ವಿವರಿಸಿದರು. ಎಲ್ಲಾ ಮಕ್ಕಳು ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು. ಹೂಡೇಂ ಶ್ರೀ ಕಂಪಳರಂಗ ಸ್ವಾಮಿ ಪ್ರೌಢಶಾಲಾ ಶಿಕ್ಷಕರಾದ ದಾದಾ ಖಲಂದರ್ ಅವರು ಮಾತನಾಡಿ ಹೆಣ್ಣಿಗೆ ಶಿಕ್ಷಣ ಅತ್ಯಗತ್ಯ ಹಾಗೂ ಒಂದು ಕುಟುಂಬದಲ್ಲಿ ತಾಯಿಯ ಪಾತ್ರ ಅತಿ ಮಹತ್ವದ್ದು ತಾಯಿ ನಮ್ಮನ್ನು ನವಮಾಸ ಹೊತ್ತು ಹೆತ್ತು ಸಾಕಿಸಲುಹಿ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುತ್ತಾಳೆ ತಾಯಿಯೇ ಮೊದಲ ಗುರು ಎಂದು ತಿಳಿಸಿದರು. ಮತ್ತು ಶೀಲಾ ಮೇಡಂ ಅವರು ಮಾತನಾಡಿ ಈಗ ಸಮಾಜದಲ್ಲಿ ಪ್ರತಿರಂಗದಲ್ಲೂ ಗಂಡಿಗೆ ಸಮಾನವಾಗಿ ಹೆಣ್ಣು ಸಾಧನೆಗೈದಿದ್ದಾಳೆ ಎಂದು ತಿಳಿಸಿದರು.ಗಣಿತ ಶಿಕ್ಷಕರಾದ ಎಸ್ ಬಿ ರಮೇಶ್ ಮಾತನಾಡಿ ಮಕ್ಕಳಿಗೆ ಅತಿ ಹೆಚ್ಚು ಜ್ಞಾನಾರ್ಜನೆಯನ್ನು ಬೆಳೆಸಿಕೊಳ್ಳಲು ದೇಶವನ್ನು ಸುತ್ತಬೇಕು ಇಲ್ಲವೇ ಕೋಶವನ್ನು ಓದಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷರು ಮಾತನಾಡಿ ಗ್ರಂಥಪಾಲಕರು ಓದುವ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಹೂಡೇಂ ಗ್ರಾಮ ಪಂಚಾಯಿತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಭೇಟಿ ನೀಡಿ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳನ್ನು ಉತ್ತೇಜಿಸುತ್ತಿದ್ದಾರೆ ಪ್ರತಿಯೊಂದು ಮಗುವು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳು ಸಾಧನೆಗೈದ ಮಹಿಳೆಯರಾದ ಸಾವಿತ್ರಿಬಾಯಿ ಫುಲೆ ಇಂದಿರಾ ಗಾಂಧಿ ಕಿತ್ತೂರು ರಾಣಿ ಚೆನ್ನಮ್ಮ ಸಾಲುಮರದ ತಿಮ್ಮಕ್ಕ ರಾಣಿ ಲಕ್ಷ್ಮೀಬಾಯಿ ಒನಕೆ ಓಬವ್ವ ಮತ್ತು ಕಿರಣ್ ಬೇಡಿ ಹಾಗೂ ಪಿಟಿ ಉಷಾ ಇವರ ಬಗ್ಗೆ ಮಾತನಾಡಿದರು. ಮತ್ತು ಚದುರಂಗ ಹಾಗೂ ಕೇರಂ ಆಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಕಂಪಾಳರಂಗ ಸ್ವಾಮಿ ಪ್ರೌಢಶಾಲಾ ಮಕ್ಕಳು.ಹೂಡೇಂ. ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೂಡೇಂ ಮತ್ತು ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ತಾಯಕನಹಳ್ಳಿ ಮಕ್ಕಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಜಗೋಪಾಲ್ ಸರ್ ಮಚ್ಚೇಂದ್ರಪ್ಪ ಸರ್ ಮತ್ತು ತಾಯಕನಹಳ್ಳಿ ಪ್ರೌಢಶಾಲಾ ಎಲ್ಲಾ ಸಿಬ್ಬಂದಿ ವರ್ಗದವರು ಮಕ್ಕಳು ಭಾಗವಹಿಸಿದ್ದರು. ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವರದಿ ; ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
