ಕೂಡ್ಲಿಗಿ:ಗೆಳೆಯರ ಬಳಗದಿಂದ, 26ವಿಕಲಚೇತನರಿಗೆ ಶಸ್ತ್ರ ಚಿಕಿತ್ಸೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ, ಫೆ11ರಂದು ಗೆಳೆಯರ ಬಳಗದಿಂದ ಪಟ್ಟಣದಲ್ಲಿ.ಸೀಳು ಅಂಗಾಂಗ ವಿಕಲಚೇತನರಿಗೆ,ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿತ್ತು. ತಪಾಸಣೆಗೊಳಗಾದ 26ಜನ ಸೀಳು ಅಂಗಾಂಗ ಹೊಂದಿದವರು, ಶಸ್ತ್ರ ಚಿಕಿತ್ಸೆಗೆ ಆಯ್ಕೆ ಯಾಗಿದ್ದದಾರೆ. ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿದಿಗೊಳಿಸಿ ಅಗತ್ಯ ಮಾಹಿತಿ ನೀಡಲಾಗಿದೆ ಎಂದು, ಗೆಳೆಯರ ಬಳಗದ ಅಧ್ಯಕ್ಷ ಹಾಗೂ ಆಯೋಜಕ ಅಬ್ದುಲ್ ರಹೆಮಾನ್ ತಿಳಿಸಿದ್ದಾರೆ. ಶಸ್ತ್ರ ಚಿಕಿತ್ಸೆಯನ್ನು ಬೆಂಗಳೂರಿನ ಶ್ರೀಮಹಾವೀರ ಜೈನ್ ಆಸ್ಪತ್ರೆಯಲ್ಲಿ, ನಿಗದಿತ ದಿನಾಂಕದಂದು ನೆರವೇರಿಸಲಾಗುವುದು ಎಂದು ಅವರು ಪ್ರಕಟಿಸಿದರು. ಮಾಜಿ ಸಚಿವ ಏನ್.ಎಂ.ನಬಿಸಾಹೇಬರು, ಹಾಗೂ ಹಿರೇಮಠ ಶ್ರೀಪ್ರಶಾಂತಸಾಗರ ಸ್ವಾಮಿ ರವರು ಕಾರ್ಯಕ್ರಮ ಉದ್ಘಾಟಿಸಿದರು. ಹಿರೇಮಠ ವಿದ್ಯಾಪೀಠದ ಗಂಗಾಧರ, ಮತ್ತು ಬೆಂಗಳೂರಿನ ಶ್ರೀಜೈನ್ ಆಸ್ಪತ್ರೆಯ ವೈಧ್ಯತಂಡ, ಶಸ್ತ್ರ ಚಿಕಿತ್ಸಾ ಸಿಬ್ಬಂದಿವರ್ಗ. ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿಗಳು ವೇದಿಕೆಯಲ್ಲಿದ್ದರು. ಕೂಡ್ಲಿಗಿಯ ಸ್ನೇಹಿತರ ಬಳಗದ ಪದಾಧಿಕಾರಿಗಳಾದ ಮಹಮ್ಮದ್ ಫಯಾಜ್, ಅಬ್ದುಲ್ ವಾಹಿದ್, ಮಹೇಶ್, ಪ್ರಕಾಶ್, ಹುಸೇನ್ ಭಾಷಾ, ಬ್ರಹನ್, ಮತ್ತಿತರರು ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ನೂರಾರು ಸೀಳು ಅಂಗಾಂ ಚೇತನರು,ಶಿಬಿರದಲ್ಲಿ ತಪಾಸಣೆಗೊಳಗಾದರು. ಪತ್ರಕರ್ತ ಹಾಗೂ ಸಾಹಿತಿ,ಉಪನ್ಯಾಸಕರಾದ ನಿರೂಪಣೆ ಕೆಎಂ ವೀರೇಶ್ ಕಾರ್ಯಕ್ರಮ ನಿರೂಪಿಸಿದರು.

ವರದಿ ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
