;

ಶರಣರ ಜೀವನ ಮೌಲ್ಯ ನಮ್ಮೆಲ್ಲರಿಗೂ ಆದರ್ಶ…!!!

ಶರಣರ ಜೀವನ ಮೌಲ್ಯ ನಮ್ಮೆಲ್ಲರಿಗೂ ಆದರ್ಶ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸ ಹಳ್ಳಿ ಹೋಬಳಿಯ ಬಯಲು ತುಂಬರಗುದ್ದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ದಿಂದ ಗುರುವಾರ ಆಯೋಜಿಸಿದ ದತ್ತಿ ಉಪನ್ಯಾಸ ಆಗುವ ವಚನ ಗಾಯನ ಕಾರ್ಯಕ್ರಮ ನಡೆಯಿತು.
ನಂತರ ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ಎಮ್ ರವಿಕುಮಾರ್ ಮಾತನಾಡಿ
ವಚನ ಸಾಹಿತ್ಯವು ಸಮಾಜದ ಅಸಮಾನತೆ ಮೂಡನಂಬಿಕೆ ಜಾತ್ಯಾತೀತತೆಯನ್ನು ಹೋಗಲಾಡಿಸಲು ಶರಣರಿಂದ ರಚಿತವಾಗಿದ್ದು ಅವುಗಳಲ್ಲಿ ವಚನಗಳ ಸಾರವನ್ನು ಎಲ್ಲರೂ ಅರ್ಥೈಸಿಕೊಂಡು ಜೀವನ ನಡೆಸಬೇಕು ಎಂದು ತಿಳಿಸಿದರು.
ಹುಲಿಕೆರೆ ಗ್ರಾಮದ ವಿಶಾಲಾಕ್ಷಿ ಎಮ್ ಷಡಕ್ಷರಿ ಹೆಸರಿನ ದತ್ತಿ ವಿಷಯದ ಸಾವಯವ ಹಾಗೂ ಅಲ್ಲಮ ಪ್ರಭುದೇವರ ಆಧ್ಯಾತ್ಮದ ಖುಷಿ ಕುರಿತು ನಿವೃತ್ತಿ ಉಪನ್ಯಾಸಕರಾದ ವಸಂತ್ ಸಜ್ಜನ್ ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರ ಕಾಯಕ ದಾಸೋಹ ತತ್ವಕ್ಕೆ ಮಾರು ಹೋಗಿ ಅಫ್ಘಾನಿಸ್ತಾನದಿಂದ ಬಂತಾದೇವಿ ಸೇರಿದಂತೆ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಆಗಮಿಸಿದರು ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಲ್ಯಾಣದಲ್ಲಿ ಎಲ್ಲರನ್ನೂ ಒಳಗೊಂಡ ಶರಣರ ಕೂಟವನ್ನು ರಚಿಸಿ ಸಮಾಜದ ಅಭುತ್ಯದಯಕ್ಕೆ ಶ್ರಮಿಸಿದರು.
ಶರಣರು ಅಲ್ಲಮಪ್ರಭು ಅವರ ತಮ್ಮ ವೈಚಾರಿಕ ಚಿಂತನೆಗಳು ವಚನಗಳಲ್ಲಿ ಸಮಾಜದಲ್ಲಿ ಬೇರುಬಿಟ್ಟ ಜಾತಿ ತಾರತಮ್ಯದ ವಿರುದ್ಧ ಹೋರಾಡಿದವರು ಎಂದು ತಿಳಿಸಿದರು.


ಸೋಮ ಚಂದ್ರಶೇಖರಯ್ಯ ಲೋಲಾಕ್ಷಮ್ಮ ಅವರ ದತ್ತಿ ವಿಷಯ ವಚನ ಸಾಹಿತ್ಯಕ್ಕೆ ಜೀವನ ಮೌಲ್ಯಗಳು ಕುರಿತು ಸಾಹಿತಿಗಳು ಮತ್ತು ಪತ್ರಕರ್ತರಾದ ಭೀಮಣ್ಣ ಗಜಪುರ ಮಾತನಾಡಿ 12ನೇ ಶತಮಾನದಲ್ಲಿ ಶರಣರು ಸರಳತೆಯಿಂದ ಕಾಯಕ ದಾಸೋಹ ಕಲ್ಪನೆಯಲ್ಲಿ ಬದುಕಿದ್ದು ಬಸವಣ್ಣ ಸೇರಿದಂತೆ ಅಂಬಿಗರ ಚೌಡಯ್ಯ ಮಡಿವಾಳ ಮಾಚಯ್ಯ. ಡೋಹರ ಕಕ್ಕಯ್ಯ. ಮಾದರ ಚೆನ್ನಯ್ಯ. ಗಾಣದ ಕಣ್ಣಪ್ಪ. ಆಯ್ದಕ್ಕಿ ಲಕ್ಕಮ್ಮ. ರಾಯಮ್ಮ ಸೇರಿದಂತೆ.
ಸಾಧನೆ ಸಾಧಕನ ಸ್ವತ್ತೇ ಹೊರತು
ಸೋಮಾರಿಗಳ ಸ್ವತ್ತಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಾಧನೆ ಅಸಾಧ್ಯವಾದದ್ದು ಯಾವುದು ಇಲ್ಲ. ನಮ್ಮ ತಾಲೂಕಿನ ಸುತ್ತಮುತ್ತಲ ಅನೇಕ ಸಾಧಕರಿದ್ದಾರೆ. ಅಲ್ಲದೆ ನೀವು ಸಹ ಸಾಧಿಸುವ ಗುರು ಇಟ್ಟುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಮತ್ತು ನೀವುಗಳು 12ನೇ ಶತಮಾನದ ಶರಣ ಶರಣೀಯರ ಬಗ್ಗೆ ವಚನಗಳ ಬಗ್ಗೆ ಮತ್ತು ಸಾಹಿತಿಗಳ ಬಗ್ಗೆ ಪುಸ್ತಕ ಓದುವ ಹವ್ಯಾಸ ಮಾಡಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅನಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಎಸ್ ಟಿ ಎಂ ಸಿ ಅಧ್ಯಕ್ಷರಾದ ರಂಗನಾಥನಹಳ್ಳಿ ನಾಗರಾಜ್. ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ. ನಿತ್ಯ ಮುಖ್ಯ ಗುರುಗಳಾದ ಸಾಮ ಸಂಗಮೇಶ್ವರಯ್ಯ. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆಎಸ್ ವೀರೇಶ್. ಗ್ರಾಮದ ಯುವ ಮುಖಂಡರಾದ ಜಿ ಕರಿಬಸವರಾಜ್. ಶಿಕ್ಷಕರಾದ ನಾಗರಾಜ್.ಪ್ರಸನ್ನ ಕುಮಾರ್. ಗೂಳಪ್ಪ. ಕೊಟ್ರೇಶ್ ಸೇರಿದಂತೆ
ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;