22- 23ನೇ ಸಾಲಿನ ಶಾಲಾ ಸಮವಸ್ತ್ರ ವಿತರಣೆ: ಕೂಡ್ಲಿಗಿ, ದಿ.3-2-23 ಶುಕ್ರವಾರ ತಾಲೂಕಿನ ಬಣವಿಕಲ್ಲು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಇರುವ ಶಾಲೆಯ ಮಕ್ಕಳಿಗೆ ಎರಡನೇ ಜೊತೆ ಶಾಲಾ ಸಮವಸ್ತ್ರವನ್ನು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಜೊತೆಗೂಡಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಿ.ಎಂ.ಬಸವರಾಜ ಹಾಗೂ ಸದಸ್ಯೆ ಶ್ರೀಮತಿ ಬಿ.ಎಂ.ಕವಿತಾ ಕೊಟ್ರೇಶ್ ಶಾಲಾ ಸಮವಸ್ತ್ರವನ್ನು ವಿತರಣೆ ಮಾಡಿದರು. ಮುಖ್ಯ ಶಿಕ್ಷಕ ಪಿ. ತಿಪ್ಪೇಸ್ವಾಮಿ, ಸಹ ಶಿಕ್ಷಕರಾದ ಜಿ. ಕೊಟ್ರಗೌಡ, ಓ. ಬಸಮ್ಮ, ದೈಹಿಕ ಶಿಕ್ಷಕ ಜಿ ಕರಿಬಸವನಗೌಡ, ಅತಿಥಿ ಶಿಕ್ಷಕರಾದ ಡಿ. ಅಸ್ಲಾಂ, ಬಿ.ಎಸ್. ಕಾವ್ಯ, ಎಂ. ಅಕ್ಷತಾ ಹಾಗೂ ಶಾಲಾ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು,ಶಾಲಾ ಮಕ್ಕಳು ಇದ್ದರು…

ವರದಿ. ವಿರೇಶ್ ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
