;

ಶಾಸಕ ಸಿದ್ದು ಸವದಿಯಿಂದ ಕೆರೆ ಅಭಿವೃದ್ಧಿಗೆ ಚಾಲನೆ…!!!

ಶಾಸಕ ಸಿದ್ದು ಸವದಿಯಿಂದ ಕೆರೆ ಅಭಿವೃದ್ಧಿಗೆ ಚಾಲನೆ

ಮಹಾಲಿಂಗಪುರ : ಸ್ಥಳೀಯ ಕೆಂಗೇರಿಮಡ್ಡಿಯಲ್ಲಿ ಎಸ್ ಎಫ್ ಸಿ ವಿಶೇಷ ಅನುದಾನದಡಿ ೧೫ ಲಕ್ಷ ಅಂದಾಜು ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿ ಹಾಗೂ ಅಮೃತ ನಗರ ಸ್ಥಾನ ಯೋಜನೆಯ ೮ ಲಕ್ಷ ಅಂದಾಜು ವೆಚ್ಚದಲ್ಲಿ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.

ನಂತರ ಸ್ಥಳೀಯ ಸಾಯಿಬಾಬಾ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ೧೩,೧೪,೧೫ ನೇ ವಾರ್ಡಿನ ಜನ ಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅತೀ ಹಿಂದುಳಿದ ಪ್ರದೇಶವಾಗಿದ್ದ ಕೆಂಗೇರಿಮಡ್ಡಿ ಇಂದು ಎಲ್ಲ ರಸ್ತೆಗಳಿಗೆ ಡಾಂಬರೀಕರಣ ಮತ್ತು ಸಿಮೆಂಟ್ ಹಾಗೂ ಫೀವರ್ ಬ್ಲಾಕ್ ಅಳವಡಿಸಿದ್ದು, ಯಾರ ಕಾಲಿಗೆ ಮಣ್ಣು ಸಹ ಹತ್ತುತ್ತಿಲ್ಲ, ಅದೇ ರೀತಿ ಚರಂಡಿ ವಿದ್ಯುತ್ ಕುಡಿಯುವ ನೀರು, ಸಮುದಾಯ ಭವನಗಳು, ಆಶ್ರಯ ಮನೆಗಳು, ರುದ್ರಭೂಮಿ ಅಭಿವೃದ್ಧಿ ಸೇರಿದಂತೆ ಕೋಟ್ಯಾಂತರ ರೂ. ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಈ ಪ್ರದೇಶ ಕಂಗೊಳಿಸುತ್ತಿದೆ, ಇದು ನಮ್ಮ ಬಿಜೆಪಿ ಸರ್ಕಾರದ ಕೊಡುಗೆ ಎಂಬದನ್ನು ಯಾರೂ ಮರೆಯಬಾರದು ಎಂದರು.
ಸ್ಥಳೀಯ ವಾರ್ಡಿನ ಸದಸ್ಯ ಶೇಖರ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಮುಖಂಡರಾದ ಈರಪ್ಪ ದಿನ್ನಿಮನಿ, ಮನೋಹರ ಶಿರೋಳ, ಮಹಾಲಿಂಗಪ್ಪ ಕುಳ್ಳೊಳ್ಳಿ ಪುರಸಭಾ ಸದಸ್ಯರಾದ ಸರಸ್ವತಿ ರಾಮೋಜಿ, ಸ್ನೇಹಲ್ ಅಂಗಡಿ, ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ಸಜನಸಾಬ ಪೆಂಡಾರಿ, ತಿಪ್ಪಣ್ಣ ಬಂಡಿವಡ್ಡರ, ಜಯವಂತ ಕಾಗಿ, ಅರ್ಜುನ ಮೋಪಗಾರ, ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ, ಪ್ರಕಾಶ ಅರಳಿಕಟ್ಟಿ,ಸುವರ್ಣಾ ಆಸಂಗಿ,ಚೈತ್ರಾ ಬಬಲಾದಿ,ಚಂದ್ರವ್ವ ಗೌಡರ ಇತರರಿದ್ದರು, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು.

ವರದಿ. ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;